‘ಬಾರೇ ಸುಂದರಿಯೇ ಹಾಡು ಮೆಚ್ಚಿದ 1 ಮಿಲಿಯನ್‌ ವೀಕ್ಷಕರು!

ಅನಿವಾಸಿ ಭಾರತೀಯರ ತಂಡದೊಂದಿಗೆ ನವ ನಾಯಕ ರಾಜ್‌ ಚರಣ್‌ ಹಾಗೂ ಅಖಿಲಾ ಪ್ರಕಾಶ್ ಜೊತೆಯಾಗಿ ನಟಿಸಿರೋ ರತ್ನಮಂಜರಿ ಚಿತ್ರದ ‘ಬಾರೇ ಸುಂದರಿಯೇ ಕೊಡಗಿನ ಸಿರಿಯೇ’ ಅನ್ನೋ ವಿಡಿಯೋ ಸಾಂಗ್ ಪ್ರೇಕ್ಷಕರ ಮನಗೆದ್ದಿದೆ. ಕೇವಲ ಮೂರೇ ದಿನದಲ್ಲಿ ಒಂದು ಮಿಲಿಯನ್‌(10 ಲಕ್ಷ) ವ್ಯೂವ್ಸ್​ ಗಳಿಸಿದ್ದು, ಸಂಗೀತ ಪ್ರಿಯರಿಗೆ ಮುದ ನೀಡುತ್ತಿದೆ. ಕಳೆದ ವಾರ ಈ ಚಿತ್ರದ ಆಡಿಯೋ ರಿಲೀಸ್ ಆಗಿದ್ದು, ‘ಬಾರೇ ಸುಂದರಿಯೇ’ ಹಾಡು ಹೆಚ್ಚು ಸದ್ದು ಮಾಡುತ್ತಿದೆ.

ಪ್ರಸನ್ನ ಭೋಜಶೆಟ್ಟರ್ ಬರೆದಿರೋ ಲಿರಿಕ್ಸ್​ಗೆ ಹರ್ಷವರ್ಧನ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ವಿಜಯ್ ಪ್ರಕಾಶ್ ಕಂಠದಲ್ಲಿ ಈ ಸಾಂಗ್​ ಅದ್ಭುತವಾಗಿ ಮೂಡಿಬಂದಿದೆ. ಹಾಡಿನಲ್ಲಿ ಕೊಡವರ ವೇಷಭೂಷಣದ ಜೊತೆ ಅದ್ಭುತ ಮೇಕಿಂಗ್ ಇನ್ನಷ್ಟು ಮೆರಗುಗೊಳಿಸಿದೆ. ಇದೊಂದು ಮರ್ಡರ್ ಮಿಸ್ಟರಿ ಚಿತ್ರವಾಗಿದ್ದು ದೇವರು, ದೆವ್ವ, ಅಪರಾಧ ಈ ಮೂರು ಅಂಶಗಳ ಸುತ್ತ ಕಥೆ ಹೆಣೆಯಲಾಗಿದೆ.

ಚಿತ್ರಕ್ಕೆ ಕರ್ನಾಟಕದ ಮಡಿಕೇರಿ ಭಾಗ ಸೇರಿದಂತೆ ವಿದೇಶಗಳಲ್ಲೂ ಚಿತ್ರೀಕರಣ ನಡೆದಿದೆ. ವಿಶೇಷ ಅಂದ್ರೆ ಚಿತ್ರ ಅಮೇರಿಕಾದ ಒಂದು ಭಾಗದಲ್ಲಿ ನಡೆದ ನೈಜ ಘಟನೆ ಆಧರಿತ ಚಿತ್ರವಾಗಿದೆ. ಇನ್ನು ಚಿತ್ರದಲ್ಲಿ ಪುನೀತ್​ರಾಜ್ ಕುಮಾರ್ ಮತ್ತು ವಸಿಷ್ಟ ಸಿಂಹ ಕೂಡ ಒಂದೊಂದು ಹಾಡನ್ನ ಹಾಡಿದ್ದಾರೆ. ಚಿತ್ರಕ್ಕೆ ಪ್ರಸಿದ್ಧ್​ ನಿರ್ದೇಶನವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!