1920ರಲ್ಲಿ ಟಿ.ಪಿ.ಕೈಲಾಸಂ ಬರೆದಿರುವ ಇಪ್ಪತ್ತೈದು ನಿಮಿಷದ ‘ಟೊಳ್ಳುಗಟ್ಟಿ’ ನಾಟಕ ‘ಮೂಕ ವಿಸ್ಮಿತ’ ಚಿತ್ರದ ಹೆಸರಿನೊಂದಿಗೆ ತೆರೆಗೆ ಬರಲು ಸನ್ನಿಹಿತವಾಗಿದೆ. ಆಗಿನ ಕಾಲದ ಕತೆಗೆ ಪ್ರಸ್ತುತ ಕಾಲಘಟ್ಟದಲ್ಲಿ, ಮೂರು ತಲೆಮಾರುಗಳು ಹೇಗೆ ತನ್ನ ಪಾತ್ರವನ್ನು ನಿರ್ವಹಿಸುತ್ತೆ. ಒಳ್ಳೆಯದು ಮತ್ತು ಕೆಟ್ಟದ್ದು ಎನ್ನುವ ವ್ಯತ್ಯಾಸಗಳಲ್ಲಿ ಮನುಷ್ಯ ತನ್ನನ್ನು ತಾನು ಹೇಗೆ ಕಂಡುಕೊಳ್ಳುತ್ತಾನೆ. ಶುರುವಿನಿಂದ ಕೊನೆವರೆಗೂ ಕುತೂಹಲ ಕಾಡುತ್ತಾ ಕೊನೆಯಲ್ಲಿ ಎಲ್ಲವು ತೆರೆದುಕೊಳ್ಳುತ್ತದೆ. ಶಿಕ್ಷಣ ಏನು ಎಂಬುದರ ಅರ್ಥ. ಅದರಂತೆ ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಚಿತ್ರವಾಗಿದೆ. ಒಂದು ಬ್ರಾಹ್ಮಣ ಕುಟುಂಬದ 53 ವರ್ಷದ ಯಜಮಾನರು ಹೆಣ್ಣು ಮಗುವಿನ ತಂದೆಯಾದಾಗ ನಡೆಯುವ ಸಂಗತಿಗಳು ಸನ್ನಿವೇಶದ ಮೂಲಕ ಬರುತ್ತದೆ. ಜೀವನದ ವಿವಿಧ ಭಾವನೆಗಳನ್ನು ಪಾತ್ರಗಳ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.
ಗಂಡಸತನ, ಸ್ವಾಭಿಮಾನ, ಅಭಿಮಾನ ಎಲ್ಲವನ್ನು ತೋರಿಸುವ ಮನೆಯ ಮುಖ್ಯಸ್ಥನಾಗಿ ಸಂದೀಪ್ಮಲಾನಿ ಮಾದ್ವಬ್ರಾಹ್ಮಣನಾಗಿ 1950ರಲ್ಲಿ ಕನ್ನಡ ಮಾತಾಡುವಂತೆ ಕಷ್ಟಪಟ್ಟು ಡಬ್ಬಿಂಗ್ ಮಾಡಿದ್ದಾರೆ. ಸಾಂಪ್ರದಾಯಿಕ ಹುಡುಗಿ, ಸ್ವತಂತ್ರ ಬಯಸುವ ಹಿರಿಸೊಸೆಯಾಗಿ ಶುಭರಕ್ಷಾ. ಕಿರಿಸೊಸೆಯಾಗಿ ಎರಡು ಗೆಟಪ್ಗಳಲ್ಲಿ ಕಾಣಿಸಿಕೊಂಡಿರುವ ಬೆಂಗಳೂರಿನ ವಾಣಿಶ್ರೀಭಟ್ಗೆ ಹೊಸ ಅನುಭವ. ಹಿರಿಯ ಮಗನಾಗಿ ಚಂದ್ರಕೀರ್ತಿ, ಕಿರಿಯವನಾಗಿ ಕಾರ್ತಿಕ್. ಗಂಡನ ದಬ್ಬಾಳಿಕೆಯನ್ನು ಸಹಿಸಿಕೊಂಡು ಹೋಗುವ ಪುಷ್ಪರಾಘವೇಂದ್ರ, ಮಧ್ಯಮ ವಯಸ್ಸಿನ ಅತೃಪ್ತ ವಿಧುವೆಯಾಗಿ ಡಾ.ಕೃಪಾ ಇವರೊಂದಿಗೆ ಶಿಲ್ಪಾಭಾಗವತರ್, ಚಿದಾನಂದ್ಕುಲಕರ್ಣೀ, ಡಿ.ಶ್ರೀಕಾಂತ್, ಸೂರಜ್ ಮುಂತಾದವರ ನಟನೆ ಇದೆ. ಗುರುದತ್ಶ್ರೀಕಾಂತ್ ಚಿತ್ರಕ್ಕೆ ರಚನೆ,ಚಿತ್ರಕತೆ, ಸಂಭಾಷಣೆ,ಸಾಹಿತ್ಯ, ನಿರ್ದೇಶನ ಮಾಡುವ ಜೊತೆಗೆ ಹುಚ್ಚ, ಲವರ್ಬಾಯ್, ನಿರ್ದೇಶಕ ಹೀಗೆ ಮೂರು ಶೇಡ್ಗಳಗೆ ಬಣ್ಣ ಹಚ್ಚಿದ್ದಾರೆ ಮತ್ತು ನಿರ್ಮಾಣದಲ್ಲಿ ಪಾಲುದಾರರು.
ನಾಲ್ಕು ಹಾಡುಗಳಿಗೆ ಡಾ.ಚಿನ್ಮಯ.ಎಂ.ರಾವ್ ಸಂಗೀತ, ಸಂತೋಷ್.ಆರ್.ಚಾವ್ಲ ಸಂಕಲನ, ಸಿದ್ದು.ಜಿ.ಎಸ್. ಛಾಯಗ್ರಹಣವಿದೆ. ಸಾಗರ, ಶಿವಮೊಗ್ಗ, ಭದ್ರಾವತಿಯಲ್ಲಿರುವ ಹಳೇ ಮನೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಶೀರ್ಷಿಕೆ ಯಾರಾಗುತ್ತಾರೆಂದು ಕ್ಲೈಮಾಕ್ಸ್ದಲ್ಲಿ ಹೇಳಲಾಗಿದೆಯಂತೆ. ಯು ಪ್ರಮಾಣ ಪತ್ರ ಪಡೆದುಕೊಂಡಿರುವ ಸಿನಿಮಾವು ಇದೇ ಹದಿನೇಳರಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ.
Be the first to comment