ನಿರೂಪಣೆಯ ಲೋಕದಲ್ಲಿ ತನ್ನದೇ ಆದ ಹೆಸರು ಮಾಡಿದ ಸ್ಯಾಂಡಲ್ವುಡ್ ನಟಿ, ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಈ ವರ್ಷವೇ ಮದುವೆಯಾಗುತ್ತೇನೆ ಎಂದು ಅಧಿಕೃತವಾಗಿ ಹೇಳಿದ್ದಾರೆ.
ಸೋಷಿಯಲ್ ಮಿಡಿಯಾ ಲೈವ್ಗೆ ಬಂದಿದ್ದ ಅನುಶ್ರೀ ಅವರಿಗೆ ನಟಿ ಮಲೈಕಾ ವಸುಪಾಲ್, ನಟ ನಾಗಭೂಷಣ್ ಅವರು ನಿಮ್ಮ ಮದುವೆ ಯಾವಾಗ? ಹುಡುಗ ಹೇಗಿರಬೇಕು? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅನುಶ್ರೀ 2025ರ ಅಂತ್ಯದೊಳಗೆ ಮದುವೆಯಾಗುವುದಾಗಿ ಹೇಳಿದ್ದಾರೆ.
ಅನುಶ್ರೀಗೆ ಮಲೈಕಾ ವಸುಪಾಲ್ ಮತ್ತು ನಾಗಭೂಷಣ್ ಹೌದಾ ಎಂದು ಮತ್ತೊಮ್ಮೆ ಕೇಳಿದ್ದು, ಅನುಶ್ರೀ, ‘ಹೌದು. ಈ ವರ್ಷವೇ ಮದುವೆ ಆಗುತ್ತೀನಿ’ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
ಇದೇ ವೇಳೆ ಹುಡುಗ ಹೇಗಿರಬೇಕೆಂದೂ ಅನುಶ್ರೀ ಮನಬಿಚ್ಚಿ ಮಾತನಾಡಿದ್ದಾರೆ. ‘ನನ್ನ ಹುಡುಗ ತುಂಬ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ ಅವನ ಲೈಫ್ ಪರವಾಗಿ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು. ನನ್ನನ್ನು ಬದುಕೋಕೆ ಬಿಡಬೇಕು’ ಎಂದು ತಿಳಿಸಿದ್ದಾರೆ.
ಅನುಶ್ರೀ ಅವರ ಮದುವೆ ಕುರಿತು ಅನೇಕ ಕಾರ್ಯಕ್ರಮಗಳಲ್ಲಿ ಅವರ ಬಳಿ ಪ್ರಶ್ನೆ ಕೇಳಲಾಗುತ್ತಿತ್ತು. ಈ ವೇಳೆ ಅನುಶ್ರೀ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆಯೇ ಮಾತನಾಡುತ್ತಿದ್ದರು. ಇದೀಗ ಮದುವೆ ಕುರಿತು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.

Be the first to comment