Vaamana Movie: ಯಶಸ್ಸಿನ ನಿರೀಕ್ಷೆಯಲ್ಲಿ ವಾಮನ

Vaamana Film Producer Chethan Gowda :

ಧನ್ವೀರ್ ಗೌಡ ಹಾಗೂ ರೀಷ್ಮಾ ನಾಣಯ್ಯ ನಟನೆಯ ವಾಮನ ಚಿತ್ರ ಏಪ್ರಿಲ್ 10ರಂದು ಬಿಡುಗಡೆ ಆಗುತ್ತಿದ್ದು ಚಿತ್ರದ ನಿರ್ಮಾಪಕ ಚೇತನ್ ಗೌಡ ಭರ್ಜರಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ ಚಿತ್ರದ ಮುದ್ದು ಮುದ್ದು ರಾಕ್ಷಸಿ ಸೇರಿದಂತೆ ಎರಡು ಹಾಡುಗಳು ಬಿಡುಗಡೆಗೊಂಡು ಭರ್ಜರಿ ಯಶಸ್ವಿ ಪಡೆದಿವೆ. ಟ್ರೈಲರ್ ಬಿಡುಗಡೆಗೊಂಡು ಜನರಿಂದ ಮೆಚ್ಚುಗೆ ಪಡೆದಿದೆ. ವಾಮನನ ಗೆಲುವಿನ ನಿರೀಕ್ಷೆಯಲ್ಲಿ ನಿರ್ಮಾಪಕರು ಇದ್ದಾರೆ.

ನಾನು ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಿಕೊಂಡವನು. ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದೆ. ಚಿತ್ರದ ಹಾಡುಗಳು ಯಶಸ್ವಿಯಾಗಿದ್ದು ಜನರು ರೀಲ್ಸ್ ಮಾಡುವುದು ಕಂಡಾಗ ಖುಷಿ ಆಗುತ್ತದೆ. ಸಿನಿಮಾ ಪ್ರೇಮಿಗಳು ಚಿತ್ರವನ್ನು ನೋಡಿ ಹರಸಬೇಕು ಎಂದು ಚೇತನ್ ಗೌಡ ಕೋರಿದ್ದಾರೆ.
ಚಿತ್ರದಲ್ಲಿ ಸಂಪತ್ ರಾಜ್, ಅಚ್ಚುತ ಕುಮಾರ್, ತಾರಾ, ಅವಿನಾಶ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಭೀಮ ಚಿತ್ರವನ್ನು ವಿತರಿಸಿದ ಜಗದೀಶ್ ಅವರು ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!