ಎಂಪುರಾನ್ ಸಿನಿಮಾದ ನಿರ್ಮಾಪಕ ಗೋಕುಲಂ ಗೋಪಾಲಂನ ಚೆನ್ನೈ ಕಚೇರಿ ಮೇಲೆ ಇಡಿ ದಾಳಿ ನಡೆಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗೋಕುಲಂ ಗ್ರೂಪ್ ಕಚೇರಿಯಲ್ಲಿ ಶೋಧ ನಡೆಸಿದ್ದಾರೆ.
ಕೋಡಂಬಾಕಂನಲ್ಲಿರುವ ಗೋಕುಲಂ ಗ್ರೂಪ್ ಕಚೇರಿ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಜಾರಿ ನಿರ್ದೇಶನಾಲಯದ ಕೊಚ್ಚಿ ಘಟಕ ಇದರ ನೇತೃತ್ವ ವಹಿಸಿತ್ತು. ಗೋಕುಲಂ ಗೋಪಾಲನ್ ನೇತೃತ್ವದ ಗೋಕುಲಂ ಗ್ರೂಪ್ 2023 ರಿಂದ ಜಾರಿ ನಿರ್ದೇಶನಾಲಯದ ತನಿಖೆಯನ್ನು ಎದುರಿಸುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಗೋಕುಲಂ ಗೋಪಾಲಂ ಹಲವಾರು ಬಾರಿ ವಿಚಾರಣೆಗೆ ಒಳಪಟ್ಟಿದ್ದಾರೆ. ಮನರಂಜನಾ ಕ್ಷೇತ್ರ, ಚಿಟ್ ಫಂಡ್‌ಗಳು, ಹಣಕಾಸು, ಚಲನಚಿತ್ರ ನಿರ್ಮಾಣ, ಕ್ರೀಡೆ ಮತ್ತು ಆತಿಥ್ಯದ ವ್ಯವಹಾರವನ್ನು ಗೋಕುಲಂ ಗೋಪಾಲಂ ಹೊಂದಿದ್ದಾರೆ.
ಗುಜರಾತ್ ಗಲಭೆಯ ಕುರಿತಾದ ಉಲ್ಲೇಖದ L2 ಎಂಪುರಾನ್ ವಿವಾದವನ್ನು ಹುಟ್ಟುಹಾಕಿದೆ. L2 ಎಂಪುರಾನ್ ಚಿತ್ರದ 17 ದೃಶ್ಯ ತೆಗೆದುಹಾಕಲು ಚಿತ್ರತಂಡ ನಿರ್ಧರಿಸಿದೆ. ಹೊಸ ಆವೃತ್ತಿಯು ಮುಂದಿನ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಗೋಕುಲಂ ಗೋಪಾಲನ್ ಅವರು ಹೇಳಿದ್ದಾರೆ.
—

Be the first to comment