ಕಾರ್ಕಿ ಚಿತ್ರದಲ್ಲಿ ಪಾವನ

ತಂತ್ರಜ್ಘಾನ ಬೆಳದಂತೆ ನಗರದ ತಾಂತ್ರಿಕ ಬದುಕು ಹೇಳಲಾಗದು, ಇಲ್ಲಿನ ಸಂಸ್ಕ್ರತಿಯು ಅನುದಿನವು ಯುವ ಜನಾಂಗದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ. ಅವರ ಗುಣಗಳು, ವರ್ತನೆಯನ್ನು ಅವಲೋಕಿಸಿದಾಗ, ಜೀವನದ ಸ್ಟೈಲ್ ಹೀಗೂ ಉಂಟಾ ಅನಿಸುತ್ತದೆ. ಇಂತಹುದೆ ಅಂಶಗಳನ್ನು ಹೆಕ್ಕಿಕೊಂಡು ಸೈಕಾಲಿಕಲ್ ಥ್ರಿಲ್ಲರ್ ರೀತಿಯಲ್ಲಿ ‘ಕಾರ್ಕಿ’ ಎನ್ನುವ ಚಿತ್ರವೊಂದು ಸೆಟ್ಟೇರಿದೆ. ಕತೆಯಲ್ಲಿ ಯುವಕನೊಬ್ಬ ದೈನಂದಿನ ಬದುಕಿನಲ್ಲಿ ವ್ಯತ್ಯಾಸ ಕಾಣುತ್ತಾನೆ. ಸದರಿ ದಿನದಂದು ತೆಗೆದುಕೊಳ್ಳುವ ನಿರ್ಣಯ ಜೀವನಪರ್ಯಂತ ತಿರುವು, ಬದಲಾವಣೆ ಆದಾಗ ಹೇಗೆ ಎದುರಿಸುತ್ತಾನೆ. ಮಹಿಳೆಯು ಮಟ್ಟಿ ನಿಂತ ಜಾಗದಲ್ಲಿ ಪುರಷನಾದವನು ಸಾಧನೆ ಎಂಬ ಹಂತಕ್ಕೆ ಎಂಗೇ ಹೋಗುತ್ತಾನೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇಂದಿನ ತಲೆಮಾರಿನ ಯುವ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚು ಕನೆಕ್ಟ್ ಆಘುತ್ತದಂತೆ. ಕತೆ ಬರೆದು ನಿರ್ದೇಶನ ಮಾಡುತ್ತಿರುವ ಲೋಕೇಶ್‍ಪ್ರಭು ಅವರಿಗೆ ಹೊಸ ಅನುಭವ.

ಯು ಟರ್ನ್ ಖ್ಯಾತಿಯ ರೋಜರ್‍ನಾರಾಯಣ್ ನಾಯಕ. ಪಾವನ ಇವರೊಂದಿಗೆ ಹೊಸಬರುಗಳಾದ ರಿಹಾನ್‍ಶಿಗೌಡ ಮತ್ತು ಐಶ್ವರ್ಯಗೌಡ ನಾಯಕಿಯರು. ಇವರೆಲ್ಲರಿಗೂ ಎರಡು ಗೆಟಪ್‍ಗಳು ಇರುವುದು ವಿಶೇಷ. ಉಳಿದಂತೆ ಮೋಹನ್‍ಜುನೇಜ, ಅಜಯ್, ಪ್ರಣಯಮೂರ್ತಿ, ಪ್ರಶಾಂತ್‍ಸಿದ್ದಿ, ಶ್ವೇತಾ, ಬೇಬಿ ರೇವತಿ.ಕೆ.ಆರ್.ಗೌಡ, ಎ.ಎನ್.ರಾವ್‍ಜಾದವ್ ಮುಂತಾದವರ ತಾರಬಳಗವಿದೆ. ಬೆಂಗಳೂರು, ದಾಂಡೇಲಿ, ಯಲ್ಲಾಪುರ ಹಾಗೂ ರಾಮೇಶ್ವರಂದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ. ಒಂದು ಹಾಡಿಗೆ ಯಧುನಂದನ್ ಸಂಗೀತವಿದೆ. ಛಾಯಾಗ್ರಹಣ ಜಿತಿನ್‍ದಾಸ್, ನೃತ್ಯ ಮುರಳಿ, ಸಾಹಸ ಮಾಸ್‍ಮಾದ ಅವರದಾಗಿದೆ. ಅಮ್ಮನ ಮನೆ ನಿರ್ಮಾಣ ಮಾಡಿರುವ ಆರ್.ಎಸ್.ಕುಮಾರ್ ಅವರೊಂದಿಗೆ ಸಂಪತ್‍ಕುಮಾರ್, ಕೃಷ್ಣಕುಮಾರ್ ಮತ್ತು ಅಕ್ಷಯ್‍ರಾವ್ ವಲ್ರ್ಡ್ ಕ್ಲಾಸ್ ಪಿಕ್ಚರ್ಸ್ ಶುರು ಮಾಡಿ ಸಿನಿಮಾಕ್ಕೆ ಹಣ ಹೂಡಿದ್ದಾರೆ. ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭದಲ್ಲಿ ಲವ್ಲಿ ಸ್ಟಾರ್ ಪ್ರೇಮ್, ಡಾಲಿ ಧನಂಜಯ್, ನೀರ್‍ದೋಸೆ ನಿರ್ದೇಶಕ ವಿಜಯಪ್ರಸಾದ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!