ಜನ ನಾಯಗನ್

ʼಜನ ನಾಯಗನ್’ ರಿಲೀಸ್‌ ಡೇಟ್‌ ಘೋಷಣೆ

‘ಸೂಪರ್‌ಸ್ಟಾರ್ʼ‌ ದಳಪತಿ ವಿಜಯ್‌ ಅವರ ಕೊನೆಯ ಸಿನಿಮಾ  ‘ಜನ ನಾಯಗನ್’ 2026 ರ  ಜನವರಿ 9 ರಂದು ರಿಲೀಸ್‌ ಆಗಲಿದೆ.

ಈ ಸಿನಿಮಾದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.  ಬಾಬಿ ಡಿಯೋಲ್ ಅವರು ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ, ಶ್ರುತಿ ಹಾಸನ್, ಪ್ರಕಾಶ್ ರಾಜ್, ನರೇನ್, ಮೋಮಿತಾ ಬೈಜು ಮುಂತಾದವರು  ನಟಿಸಿದ್ದಾರೆ.

ಎಚ್ ವಿನೋದ್ ನಿರ್ದೇಶಿನದ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ವೆಂಕಟ್ ಕೆ ನಾರಾಯಣ್, ಲೋಥಿನ್, ಜಗದೀಶ್ ಪಳನಿಸಾಮಿ ಮುಂತಾದವರು ಎನ್ ಕೆ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘ಜನ ನಾಯಗನ್’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.  ಈ ಚಿತ್ರದ ಬಜೆಟ್ ಸುಮಾರು 300 ಕೋಟಿ ರೂಪಾಯಿ  ಎಂದು ಹೇಳಲಾಗುತ್ತಿದೆ.

ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ಕಾರಣದಿಂದಾಗಿ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಕ್ರೇಜ್ ಶುರುವಾಗಿದೆ.  ಈ ಚಿತ್ರ ನೋಡಲು ವೀಕ್ಷಕರು ದೊಡ್ಡ ಮಟ್ಟದಲ್ಲಿ ಬರುವ ಸಾಧ್ಯತೆಗಳಿವೆ.

ಈ ಹಿಂದೆ ವಿಜಯ್ ಅವರ ಅನೇಕ ಸಿನಿಮಾಗಳು ಪೊಂಗಲ್ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಿವೆ. ‘ಜನ ನಾಯಗನ್’ ಕೂಡ ಪೊಂಗಲ್‌ ಗೆ  ರಿಲೀಸ್‌ ಆಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!