ಬಿಗ್ ಬಾಸ್ ಖ್ಯಾತಿಯ ರಜತ್ ಮತ್ತು ವಿನಯ್, ಪೊಲೀಸರಿಗೆ ನಕಲಿ ಮಚ್ಚು ಒಪ್ಪಿಸಿದ್ದರಿಂದ ಬಂಧನವಾಗುವ ಭೀತಿಯಿಂದ ಪರಾರಿ ಆಗಿದ್ದಾರೆ.
ರಜತ್ ಮತ್ತು ವಿನಯ್, ಕಾಟೇರ ಸಿನಿಮಾದ ಮಚ್ಚು ಹಿಡಿದು ರೀಲ್ಸ್ ಮಾಡಿ ವಿವಾದಕ್ಕೆ ಸಿಲುಕಿದ್ದರು. ಪೊಲೀಸರು ಬಂಧಿಸಿ ಮಚ್ಚು ತಂದು ಒಪ್ಪಿಸುವಂತೆ ತಾಕೀತು ಮಾಡಿದ್ದರು. ರಾತ್ರೋ ರಾತ್ರಿ ರಜತ್ ಕಡೆಯವರು ನಕಲಿ ಫೈಬರ್ ಮಚ್ಚನ್ನು ಪೊಲೀಸರಿಗೆ ತಂದುಕೊಟ್ಟು ಪೊಲೀಸ್ ಠಾಣೆಯಿಂದ ಬಿಡುಗಡೆ ಆಗಿದ್ದರು. ರೀಲ್ಸ್ ಮಾಡಿದ್ದ ಆಯುಧವನ್ನು ಬದಲಿಸಿ ತಂದಿದ್ದಾರೆ ಎಂಬುದು ತಿಳಿದುಬಂದಲ್ಲಿ ಸಾಕ್ಷ್ಯ ನಾಶದ ಕೇಸ್ ದಾಖಲಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.
ಪೊಲೀಸರಿಗೆ ಒಪ್ಪಿಸಿದ ಮಚ್ಚು ನಕಲಿ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಪೊಲೀಸರಿಗೆ ಕೊಟ್ಟಿರುವ ಮಚ್ಚು ಹಾಗೂ ರೀಲ್ಸ್ನಲ್ಲಿ ಬಳಕೆ ಮಾಡಿದ ಮಚ್ಚು ತಾಳೆಯಾಗುತ್ತಿಲ್ಲ. ರಜತ್ ಹಾಗೂ ವಿನಯ್ ಅವರ ಮೇಲೆ ಸಾಕ್ಷ್ಯ ನಾಶದ ಕೇಸ್ ದಾಖಲು ಮಾಡಲಾಗುತ್ತದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಬಂಧನದ ಭೀತಿಯಿಂದ ವಿಚಾರಣೆಗೆ ಹಾಜರಾಗದ ರಜತ್, ವಿನಯ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಇದುವರೆಗೂ ಠಾಣೆ ಬಳಿ ರಜತ್, ವಿನಯ್ ಬಂದಿಲ್ಲ. ಬಂಧನದ ಭೀತಿಯಿಂದ ಠಾಣೆಗೆ ಹಾಜರಾಗದೆ ಎಸ್ಕೇಪ್ ಆಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿವೆ. ಜೊತೆಗೆ ಕಾನೂನು ಸಲಹೆ ಪಡೆಯಲು ವಕೀಲರ ಸಂಪರ್ಕಿಸುವ ಸಾಧ್ಯತೆಯೂ ಇದೆ.
ಇಬ್ಬರೂ ಪೊಲೀಸ್ ಠಾಣೆಗೆ ವಿಚಾರಣೆಗೆ ಬಂದರೆ ಪುನಃ ಬಂಧನ ಆಗುವುದು ಖಚಿತವಾಗಿ ವಿಚಾರಣೆಗೆ ಹೆದರಿ ಠಾಣೆಗೆ ಬರದೇ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Be the first to comment