ಮೇಘನಾ ಗಾಂವ್ಕರ್‌

ಪಿಎಚ್‌ಡಿ ಪದವಿ ಪಡೆದ ಮೇಘನಾ ಗಾಂವ್ಕರ್‌

ಕನ್ನಡದ  ನಟಿ ಮೇಘನಾ ಗಾಂವ್ಕರ್‌ ಪಿಎಚ್‌ಡಿ ಪದವಿ ಪಡೆದಿದ್ದು, 6 ವರ್ಷಗಳ ಸತತ ಪರಿಶ್ರಮ ಫಲ ನೀಡಿದೆ ಎಂದು ಹೇಳಿದ್ದಾರೆ.

ಮೇಘನಾ ಗಾಂವ್ಕರ್‌ ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ತಂದೆ ತಾಯಿಯ ಆಶೀರ್ವಾದ ಫಲಿಸಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ   ಹಂಚಿಕೊಂಡಿರುವ ಮೇಘನಾ ಗಾಂವ್ಕರ್‌ , ‘ಇವತ್ತು ನಾನು ನಿಮ್ಮೆಲ್ಲರ ಜೊತೆ ಖುಷಿಯ ವಿಚಾರ, ಹೆಮ್ಮೆಯ ವಿಚಾರ, ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಆರು ವರ್ಷಗಳಿಂದ ನಾನು ನನ್ನ ಪಿಎಚ್‌ಡಿ ಮಾಡುತ್ತಿದ್ದೆ. 2024ರ ಅಕ್ಟೋಬರ್‌ನಲ್ಲಿ ನಾನು ನನ್ನ ಪಿಎಚ್‌ಡಿ ವರದಿಯನ್ನು ಯಶಸ್ವಿಯಾಗಿ ಸಲ್ಲಿಸಿದ್ದೆ. ಕಳೆದ ವಾರ ನನ್ನ ವೈವಾ ಕೂಡ ಆಯ್ತು. ಇವತ್ತು ನಾನು ನನ್ನ ಡಾಕ್ಟರೇಟ್‌ ಪದವಿಯನ್ನು ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಇದು ತುಂಬಾ ವಿಶೇಷವಾದದ್ದು’ ಎಂದು ಹೇಳಿದ್ದಾರೆ.

‘ನಾನು ನನ್ನ ಈ ಪಿಎಚ್‌ಡಿ ಡಾಕ್ಟರೇಟ್‌ ಪದವಿಯನ್ನು ನನ್ನ ತಂದೆಗೆ ಅರ್ಪಿಸುತ್ತೇನೆ. ಯಾಕೆಂದರೆ ನಾನು ಪಿಎಚ್‌ಡಿ ಮಾಡಬೇಕು ಎನ್ನುವುದು ನನ್ನ ತಂದೆಯ ಕನಸು. ನನ್ನ ಪಿಎಚ್‌ಡಿ ವಿಷಯ ಸಿನಿಮಾ ಮತ್ತು ಸಾಹಿತ್ಯ. ಈ ವಿಷಯ ನನಗೆ ತುಂಬಾ ಹತ್ತಿರವಾಗಿತ್ತು. ಈ ವಿಡಿಯೋ ಮೂಲಕ ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಯಾಕೆಂದರೆ ನಾನು ಮೊದಲು ಪಿಎಚ್‌ಡಿ ಬಗ್ಗೆ ಹೇಳಿಕೊಂಡ ದಿನದಿಂದ ಈವರೆಗೆ ನೀವೆಲ್ಲರೂ ನನಗೆ ತುಂಬಾ ಬೆಂಬಲ ಕೊಟ್ಟಿದ್ದೀರಿ. ಈ ಪಯಣದಲ್ಲಿ ನನ್ನ ಜೊತೆಯಲ್ಲಿ ನಿಂತಿರುವುದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು’ ಎಂದು ಮೇಘನಾ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!