ನಾಗತ್ತಿಹಳ್ಳಿ ಚಂದ್ರಶೇಖರ್ ಸಾರಥ್ಯದ ಟೆಂಟ್ ಸಿನಿಮಾದ ವಿದ್ಯಾರ್ಥಿಗಳು ನಾಯಕ, ನಾಯಕಿ. ಹಂಸಲೇಖಾ ಒಡೆತನದ ದೇಸಿ ಕಾಲೇಜಿನ ಹುಡುಗರು ಸಂಗೀತ ನಿರ್ದೇಶಕರು, ಸಾಹಿತಿಗಳು. ಇವರಿಬ್ಬರ ಜುಗಲ್‍ಬಂದಿಯಿಂದ ಸೆಸ್ಪನ್ಸ್, ಥ್ರಿಲ್ಲರ್ ಮಾದರಿಯ ‘ರತ್ನಮಂಜರಿ’ ಚಿತ್ರವು ಸಿದ್ದಗೊಂಡಿದೆ. ಪ್ರಚಾರದ ಕೊನೆ ಹಂತವಾಗಿ ಸಿನಿಮಾದ ಧ್ವನಿಸಾಂದ್ರಿಕೆಯು ಲೋಕಾರ್ಪಣೆಗೊಂಡಿತು. ಸರದಿಯಂತೆ ಎಲ್ಲರಿಗೂ ಮೈಕ್ ಲಭ್ಯವಾಯಿತು. ಕಿಚ್ಚ ಸಿನಿಮಾದ ಸಂದರ್ಭದಲ್ಲಿ ಹಂಸಲೇಖಾರವರು ಬ್ಯುಸಿ ಇದ್ದರು. ಅವರಿಗೆ ಹದಿನೈದು ನಿಮಿಷ ಸಮಯ ತೆಗೆದುಕೊಂಡು, ಕತೆ ಮುಗಿಸಿದಾಗ ಮುಕ್ಕಾಲು ಗಂಟೆ ಆಗಿತ್ತು. ಇದು ಶಿವಣ್ಣರಿಗೆ ಹೇಳಿ ಮಾಡಿಸಿದಂತಿದೆ. ಮುಂದುವರೆಸು ಎಂದು ಹೇಳಿದ್ದರು. ಹಂಸಲೇಖಾ ಸರ್ ಹೆಗಲಮೇಲೆ ಕೈ ಹಾಕಿದ್ದು ಇಲ್ಲಿಯತನಕ ಬಂದಿದೆ. ಇಂದು ದೀಪ ಹಚ್ಚುವ ಮೂಲಕ ಶುಭಹಾರೈಸಿದ್ದಾರೆಂದರೆ ಹಿಟ್ ಆಗುವುದು ಖಚಿತ. ಇಲ್ಲಿರುವವರು ಸಾಕಷ್ಟು ಪ್ರತಿಭೆಗಳು ಅವರ ಗರಡಿಯಲ್ಲಿ ಬಂದವರಾಗಿದ್ದಾರೆ. ಜೀವನದಲ್ಲಿ ಮೂರು ಆಸೆಗಳು ಇತ್ತು. ಅಗಲಿದ ಅಶ್ವತ್ ಅವರಿಗೆ ಆಕ್ಷನ್ ಹೇಳಬೇಕು, ಎಸ್.ಬಿ.ಬಾಲಸುಬ್ರಮಣ್ಯಂ ಅವರಿಂದ ಹಾಡಿಸಬೇಕು, ಸರ್ ಅವರಿಂದ ಸಂಗೀತ ಮಾಡಿಸಬೇಕು. ಮೂರರಲ್ಲಿ ಎರಡಾದರೂ ಮುಂದೆ ಆಗಬಹುದು ಎನ್ನುವ ಆಶಾಭಾವನೆಯಲ್ಲ ಇದ್ದೇನೆಂದು ನಿರ್ದೇಶಕ ಪ್ರಸಿದ್ದ್ ಸಂತಸ ಹಂಚಿಕೊಂಡರು.
ರಾಜ್‍ಚರಣ್ ಶಾಲೆಯಲ್ಲಿ ವಿನಯವಂತ, ಬುದ್ದಿವಂತ,ಶ್ರದ್ದಾವಂತನಾಗಿದ್ದ. ಅಪರೂಪದ ಗುಣವುಳ್ಳವನಾಗಿದ್ದು, ಅಣ್ಣಾವ್ರ ಹೆಸರು ಇರುವುದರಿಂದ ಇದು ಒಲಿದಿರಬಹುದು. ವಿನಯ, ಪ್ರತಿಭೇ ಇದ್ದರೆ ಬೆಳವಣಿಗೆ ಕಾಣ್ತಾರೆ. ಈತನ ಮೇಲೆ ಹಣಹೂಡುವವರು ಮೇಳೈಸಿದ್ದಾರೆ. ಪ್ರಚಲಿತ ಚಿತ್ರರಂಗವನ್ನು ಹೊಸಬರು ನಡೆಸಿಕೊಂಡು ಹೋಗುತ್ತಿದ್ದಾರೆಂದು ನಾಗತ್ತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಸಂಗೀತ ನಿರ್ದೇಶಕ, ನಿರ್ಮಾಪಕ, ನಿರ್ದೇಶಕ ಅವರುಗಳ ಖಜಾನೆ ಯಶಸ್ವಿಯಾಗುವ ಲಕ್ಷಣಗಳು ಇವೆ. ಎರಡು ಹಾಡು ಬರೆಯಲಾಗಿದ್ದು, ಅಪ್ಪು, ಟಿಪ್ಪು ಹಾಡಿದ್ದಾರೆಂದು ಕೆ.ಕಲ್ಯಾಣ್ ನಗಿಸಿದರು.
ಪ್ರಾರಂಭದಿಂದಲೂ ಚಿತ್ರವು ಜನರಿಗೆ ತಲುಪುತ್ತಿದೆ. ವಿದೇಶದಲ್ಲಿ ನೆಲೆಸಿರುವವರು ಕನ್ನಡ ಮರೆತಿದ್ದಾರೆಂದು ಆರೋಪ ಕೇಳಿಬರುತ್ತಿತ್ತು. ಅದು ಸುಳ್ಳು. ಮನೆಯಲ್ಲಿ ಎಲ್ಲರೂ ಮಾತೃಭಾಷೆಯನ್ನು ಮಾತನಾಡುತ್ತಾರೆ. ಎನ್‍ಆರ್‍ಐ ಕನ್ನಡಿಗನಾಗಿ ಕಾಣಿಸಿಕೊಂಡಿದ್ದು, ಒಂದು ಕಾರಣದ ಮೇಲೆ ಭಾರತಕ್ಕೆ ಬರುತ್ತೇನೆ. ಅದು ಏನೆಂದು ಸಿನಿಮಾ ನೋಡಬೇಕು ಅಂತ ನಾಯಕ ರಾಜ್‍ಚರಣ್ ಅವಲತ್ತು
ಫ್ಯಾಶನ್ ಡಿಸೈನರ್ ಆಗಿ ರತ್ನಮಂಜರಿ ಯಾರು ಎಂಬುದು ನನಗೂ ಗೊತ್ತ್ತಿಲ್ಲ ಅಂತಾರೆ ನಾಯಕಿ ಅಖಿಲಾಪ್ರಕಾಶ್. ಚಿತ್ರ ಮುಗಿದಿದ್ದು ಬೇಸರ ತರಿಸಿದೆ. 80 ಜನರ ತಂಡದೊಂದಿಗೆ ಕೂರ್ಗ್, ಅಮೇರಿಕಾದಲ್ಲಿ ಕುಟುಂಬದಂತೆ ಇದ್ದೇವು. ಮುಂದಿನ ತಿಂಗಳು ಎರಡನೆ ವಾರದಂದು ಬಿಡುಗಡೆ ಮಾಡಲು ಯೋಜನೆ ಹಾಕಲಾಗಿದೆ ಎಂದು ನಿರ್ಮಾಪಕರಲ್ಲಿ ಒಬ್ಬರಾದ ಸಂದೀಪ್‍ಕುಮಾರ್ ಮಾಹಿತಿ ನೀಡಿದರು.
ಸಿನಿಮಾ ಮುಗಿದಿದೆ. ಇನ್ನೆನಿದ್ದರೂ ನೀವುಗಳು ಚಪ್ಪಾಳೆ ತಟ್ಟಿ ನಿರ್ಮಾಕರಿಗೆ ದುಡ್ಡು ವಾಪಸ್ಸು ಬರುವಂತೆ ಮಾಡಬೇಕು. ಒಂದು ಕಾಲದದಲ್ಲಿ ರತ್ನಮಂಜರಿ ಸಿನಿಮಾವು ಸೂಪರ್ ಹಿಟ್ ಆಗಿತ್ತು. ಅದೇ ಹೆಸರಿನ ಮೇಲೆ ಬರುತ್ತಿರುವ ಚಿತ್ರವು ಅದರಂತೆ ಆಗಲಿ. ನಾಯಕ ವಿನಯವಂತ, ನಾಯಕಿ ಬ್ಯೂಟಿಫೂಲ್ ಐಸ್, ವಂಡರ್‍ಫೈಲ್ ಥೈಸ್. ಮಂಜರಿಯಲ್ಲಿ ಜರಿಜರಿಯಾಗಿ ಮಿಂಚಿದ್ದಾರೆ. ಹರ್ಷವರ್ಧನ್‍ರಾಜ್ ಒಳ್ಳೆ ರಾಗಗಳನ್ನು ನೀಡಿದ್ದಾರೆ. ಇಷ್ಟು ದಿವಸ ಚುನಾವಣೆ ಕಾವು ಇತ್ತು. ಅದನ್ನು ದಣಿವಾರಿಸಿಕೊಳ್ಳಲು ಇದನ್ನು ನೋಡಬೇಕು. ಮೂವತ್ತೈದು ವರ್ಷದಿಂದ ಎಲ್ಲರಿಗೂ ಬೆನ್ನು ತಟ್ಟುತ್ತಾ ಬಂದಿದ್ದೇನೆ. ಗತಕಾಲದಿಂದಲೂ ಕನ್ನಡ ಚಿತ್ರರಂಗ ಎಲ್ಲಾ ಕಡೆ ಪಸರಿಸಬೇಕೆಂದು ಸಾಕಷ್ಟು ಮಹನಿಯರು ದುಡಿದಿದ್ದು, ಕೆಜಿಎಫ್ ಮೂಲಕ ಫಲ ಕೊಟ್ಟಿದೆ. ಒಳ್ಳೆ ಸಿನಿಮಾ ಮಾಡಿದರೆ ನಿರ್ಮಾಪಕ, ನಿರ್ದೇಶಕ ಸೆಟ್ಲ್ ಆದಾಗ ವ್ಯಾಪರ ಅಭಿವೃದ್ದಿ ಹೊಂದುತ್ತದೆ. ಇಲ್ಲಿಂದ ಹೋದವರು ಕನ್ನಡದಲ್ಲೇ ಉಸಿರಾಡುತ್ತಿದ್ದಾರೆ. ಈಗಿನ ಪರಿಸ್ಥತಿಯಲ್ಲಿ 25 ದಿವಸ ಪ್ರದರ್ಶನ ಕಾಣಲಿ ಎಂದು ನಾದಬ್ರಹ್ಮರು ಹೇಳುವಲ್ಲಿಗೆ ಸುಂದರ ಕಾರ್ಯಕ್ರಮಕ್ಕೆ ತೆರೆಬಿತ್ತು.
ನಟಿ ಪಲ್ಲವಿರಾಜು, ಕ್ಲೈಮಾಕ್ಸ್ ಗೀತೆ ಹಾಡಿರುವ ವಸಿಷ್ಟಸಿಂಹ, ವಾಣಿಜ್ಯ ಮಂಡಳಿ ಕಾರ್ಯದರ್ಶಿ ಬಾ.ಮ.ಹರೀಶ್, ಸಂಗೀತ ನಿರ್ದೇಶಕರು, ರಾಕೇಶ್‍ಅಡಿಗ ಮುಂತಾದವರು ಉಪಸ್ತಿತರಿದ್ದರು.
Be the first to comment