ದರ್ಶನ್ ಜೊತೆಗೆ ನವಗ್ರಹ ಚಿತ್ರದಲ್ಲಿ ನಟಿಸಿದ್ದ ಶರ್ಮಿಳಾ ಮಾಂಡ್ರೆ ರಾಜಕಾರಣಿಯಾಗಿ ‘ಡೆವಿಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಕಾಶ್ ವೀರ್ ಜೊತೆಗೆ ಶರ್ಮಿಳಾ ಮಾಂಡ್ರೆ ಅವರ ಮೊದಲ ಸಹಯೋಗ ಇದಾಗಿದೆ.
‘ಚಿತ್ರದಲ್ಲಿ ನಾನು ಒಬ್ಬ ರಾಜಕಾರಣಿಯಾಗಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಈ ಪಾತ್ರವನ್ನು ಮಾಡಬೇಂದು ಬಹಳ ದಿನಗಳಿಂದ ಆಸೆಯಿತ್ತು. ಇದು ಪ್ರಭಾವ ಬೀರುವ ಪಾತ್ರ.ಅದನ್ನು ಪರದೆಯ ಮೇಲೆ ಜೀವಂತಗೊಳಿಸಲು ನಾನು ಉತ್ಸುಕಳಾಗಿದ್ದೇನೆ’ ಎಂದು ಶರ್ಮಿಳಾ ಮಾಂಡ್ರೆ ತಿಳಿಸಿದ್ದಾರೆ.
‘ದರ್ಶನ್ ಜೊತೆ ತೆರೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ಡೆವಿಲ್ ಚಿತ್ರದ ಪಾತ್ರವರ್ಗ ಮತ್ತು ಕಥೆಯು ವಿಶಿಷ್ಟವಾದದ್ದನ್ನು ಹೊಂದಿದೆ. ಅದಕ್ಕಾಗಿಯೇ ನಾನು ಚಿತ್ರದ ಭಾಗವಾಗಲು ನಿರ್ಧರಿಸಿದೆ’ ಎಂದು ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ‘ಡೆವಿಲ್’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಶರ್ಮಿಳಾ ಮಾಂಡ್ರೆ ಮಾರ್ಚ್‌ನಲ್ಲಿ ತಮ್ಮ ಭಾಗಗಳ ಚಿತ್ರೀಕರಣ ಪೂರ್ಣಗೊಳಿಸಲಿದ್ದಾರೆ. ಏಪ್ರಿಲ್‌ನಲ್ಲಿ ಉಳಿದ ದೃಶ್ಯಗಳನ್ನು ಮುಗಿಸಲಿದ್ದಾರೆ.
ಜೈ ಮಾತಾ ಕಂಬೈನ್ಸ್ ಪ್ರಸ್ತುತಪಡಿಸುವ ಮತ್ತು ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಮತ್ತು ಪ್ರಕಾಶ್ ವೀರ್ ನಿರ್ಮಿಸಿರುವ ‘ಡೆವಿಲ್’ ಚಿತ್ರದಲ್ಲಿ ರಚನಾ ರೈ ನಟಿಸಿದ್ದಾರೆ. ಮಹೇಶ್ ಮಂಜ್ರೇಕರ್ ಖಳನಾಯಕನಾಗಿ ನಟಿಸಿದ್ದಾರೆ. ತುಳಸಿ, ಅಚ್ಯುತ್ ಕುಮಾರ್ ಇದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ, ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ.

Be the first to comment