ಯುವ ಬಳಿಕ ಯುವರಾಜ್ ಕುಮಾರ್ ಎಕ್ಕ ಅವತಾರವೆತ್ತಿರುವುದು ಗೊತ್ತೇ ಇದೆ. ಶೂಟಿಂಗ್ ಹಂತದಲ್ಲಿಯೇ ಭಾರೀ ಹೈಪ್ ಕ್ರಿಯೇಪ್ ಕ್ರಿಯೇಟ್ ಮಾಡಿರುವ ಎಕ್ಕ ಸಿನಿಮಾದ ಮೊದಲ ಹಾಡು ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲಾಗಿದೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಎಕ್ಕ ಟೈಟಲ್ ಸಾಂಗ್ ಅನಾವರಣಗೊಂಡಿದೆ.
ಎಕ್ಕಾ ಮಾರ್ ಮಾರ್ ಅಂತಾ ಯುವರಾಜ್ ಕುಮಾರ್ ಚಿಂದಿ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಬಾಬಾ ಭಾಸ್ಕರ್ ಕೊರಿಯೋಗ್ರಫಿಗೆ ಯುವ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ನಾಗಾರ್ಜುನ್ ಶರ್ಮಾ ಕ್ಯಾಚಿ ಮ್ಯಾಚಿ ಪದಪೊಣಿಸಿ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಮ್ಯೂಸಿಕ್ ಕಿಕ್, ರೋಹಿತ್ ಪದಕಿ, ಚರಣ್ ರಾಜ್ ಹಾಗೂ ಮಹಾಲಿಂಗ್ ವಿ ಎಂ ವಾಯ್ಸ್, ಯುವ ಎನರ್ಜಿ.. ಟೋಟಲ್ ಆಗಿ ಎಕ್ಕ ಟೈಟಲ್ ಟ್ರ್ಯಾಂಕ್ ಬೊಂಬಾಟ್ ಆಗಿ ಮೂಡಿಬಂದಿದೆ.
ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ‘ಎಕ್ಕ’ ಚಿತ್ರ ನಿರ್ಮಾಣ ಮಾಡುತ್ತಿವೆ. ಬಹಳ ಅದ್ಧೂರಿಯಾಗಿಯೇ ಈ ಆಕ್ಷನ್ ಥ್ರಿಲ್ಲರ್ ಚಿತ್ರ ಜೂನ್ 6ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ರೋಹಿತ್ ಪದಕಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಎಕ್ಕ ಸಿನಿಮಾದಲ್ಲಿ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿ. ಸಂಜನಾ ಆನಂದ್, ಸಂಪದಾ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ.
ರೋಹಿತ್ ಪದಕಿ, ವಿಕ್ರಂ ಹತ್ವಾರ್ ಜೊತೆಗೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇನ್ನು, ನಿರ್ದೇಶನವೂ ಅವರದ್ದೇ. ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಸಂಕಲನ ಎಕ್ಕ ಸಿನಿಮಾಗಿದೆ. ಒಬ್ಬ ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆಯಂತೆ.

Be the first to comment