ಶ್ರೀ ಕೃಷ್ಣ ಸೋಮಯಾಜಿ ಅವರು ಮುಖ್ಯಸ್ಥರಾಗಿರುವ ಬೆಂಗಳೂರು ಮೂಲದ ಸೋಮಯಾಜಿ ಕ್ರಿಯೇಟಿವ್ಸ್ ಈಗ ನಿರೂಪಣಾತ್ಮಕ ಮ್ಯೂಸಿಕ್ ವಿಡಿಯೋ ಆದ `ಝೋಂಕಾ ಹವಾ ಕಾ’ (ಹೊಸ ಗಾಳಿ ಬೀಸಿದೆ)ವನ್ನು ಹೊರತಂದಿದೆ. ಜನಪ್ರಿಯ ಬಾಲಿವುಡ್ ಗಾಯಕಿ ಸುನೀಧಿ ಚೌಹಾನ್ ಹಾಡಿರುವ ಈ ಹಾಡನ್ನು ಬೆಂಗಳೂರಿನ ಯುವಕಲಾವಿದರ ತಂಡ ಸಂಯೋಜಿಸಿ ಚಿತ್ರೀಕರಣ ನಡೆಸಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರಿಗೆ ಗೌರವಾತ್ಮಕವಾಗಿ ಈ ವಿಡಿಯೋ ತಯಾರಿಸಲಾಗಿದೆ. ಈ ವಿಡಿಯೊವನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ತೇಜಸ್ವಿ ಸೂರ್ಯ ಅವರು ಮಲ್ಲೇಶ್ವರದ ಎಸ್‍ಆರ್‍ವಿ ಥಿಯೇಟರ್‍ನಲ್ಲಿ ಮಾಧ್ಯಮದವರು, ತಂಡದ ಸದಸ್ಯರು, ಸ್ನೇಹಿತರು ಮತ್ತು ಬೆಂಬಲಿಗರ ಹಾಜರಿಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದರು.
ಸೋಮಯಾಜಿ ಕ್ರಿಯೇಟಿವ್ಸ್ ಬೆಂಗಳೂರು ಮೂಲದ ಮತ್ತು ಶ್ರೀ ಕೃಷ್ಣ ಸೋಮಯಾಜಿ ಅವರಿಂದ ಸ್ಥಾಪಿತವಾದ ಸೋಮಯಾಜಿ ಸಮೂಹದ ಬ್ರಾಂಡಿಂಗ್ ಮತ್ತು ಸೃಜನಾತ್ಮಕ ಭಾಗವಾಗಿದೆ. ಈ ಸಮೂಹ ತನ್ನ ವಿಭಾಗವಾದ ಸೋಮಯಾಜಿ ಟೆಕ್ನೊಲ್ಯಾಬ್ಸ್ ಅಂಡ್ ಇನ್‍ಫ್ರಾಸ್ಟ್ರಕ್ಟರ್ ಸಲ್ಯೂಷನ್ಸ್, ಸೋಮಯಾಜಿ ಇನ್ವೆಸ್ಟ್‍ಮೆಂಟ್ಸ್ ಅಂಡ್ ವೆಂಚರ್ಸ್‍ಗಳ ಮೂಲಕ ಬಹುಮುಖಿ ಕೊಡುಗೆಗಳನ್ನು ಪೂರೈಸುತ್ತಿದೆ. ಸೃಜನಾತ್ಮಕ ವ್ಯಕ್ತಿಯಾಗಿ ಕೃಷ್ಣ ಅವರು ಸ್ವತಃ ಈ ಮ್ಯೂಸಿಕ್ ವಿಡಿಯೋದ ಚಿಂತನೆ ಸಾದರಪಡಿಸಿದ್ದು, ಅವರೆ ನಿರ್ಮಾಪಕರಾಗಿರುತ್ತಾರೆ. ಈ ಸಂದರ್ಭದಲ್ಲಿ ಅವರು ಮಾತನಾಡಿ, “ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವ ಸೋಮಯಾಜಿ ಕ್ರಿಯೇಟಿವ್ಸ್‍ಗೆ ಝೋಂಕಾ ಹವಾ ಕಾ ಮ್ಯೂಸಿಕ್ ವಿಡಿಯೋ ಮೊದಲ ಯೋಜನೆಯಾಗಿದೆ. ಇದು ನಮಗೆ ಬಹಳ ವಿಶೇಷವಾಗಿದೆ. ಈ ಚಿಂತನೆ ನಮ್ಮ ಮನಸ್ಸಿನಲ್ಲಿ ಬಹಳ ದಿನಗಳಿಂದ ಇತ್ತು. ತನ್ನ ಪ್ರತಿಭಾನ್ವಿತ ತಂಡದವರೊಂದಿಗೆ ವಿವರವಾಗಿ ಚರ್ಚಿಸಿದ ನಂತರ ಇದರ ಚಿತ್ರಕಥೆ ಮತ್ತು ನಿರ್ಮಾಣ ಕೈಗೊಳ್ಳಲಾಯಿತು. ಯಾವುದೇ ಪ್ರಚಾರ ಅಥವ ಘೋಷಣ ಕ್ಷೇತ್ರವನ್ನು ಪ್ರವೇಶಿಸದೆ ಭಾರತದ ಪ್ರಯಾಣದ ಸಂಪೂರ್ಣ ಚಿತ್ರಣವನ್ನು ನಮ್ಮ ಲೆನ್ಸ್‍ಗಳ ಮೂಲಕ ನೀಡುವುದು ಇದರ ಕೇಂದ್ರ ಚಿಂತನೆಯಾಗಿದೆ’’ ಎಂದರು.
ಅವರು ಮಾತು ಮುಂದುವರಿಸಿ -“ಕಾರ್ಪೋರೇಟ್ ವಿಡಿಯೋಗಳು ಮತ್ತು ಚಲನಚಿತ್ರಗಳನ್ನು ನಮ್ಮ ವೈವಿಧ್ಯಪೂರ್ಣ ಗ್ರಾಹಕರಿಗಾಗಿ ನಾವು ನಿಗದಿತವಾಗಿ ವಿನ್ಯಾಸಗೊಳಿಸುತ್ತಿರುತ್ತೇವೆ. ಆದರೆ, ವೈಯಕ್ತಿಕ ಆಸಕ್ತಿಯೊಂದಿಗೆ ನಾವು ನಂಬುವ ವಿಷಯ ಕುರಿತು ದೃಶ್ಯಾತ್ಮಕ ನಿರೂಪಣೆಯನ್ನು ಸೃಷ್ಟಿಸುವುದು ನಿಜಕ್ಕೂ ಮೋಜಿನ ವಿಷಯವಾಗಿದೆ! ಈ ಯೋಜನೆಯ ನಿರ್ದೇಶನವನ್ನು ಕೂಡ ನಾನು ಮಾಡಿದ್ದು, ಇದು ನನಗೆ ತೃಪ್ತಿ ಮತ್ತು ರೋಮಾಂಚನ ನೀಡಿದೆ’’ ಎಂದರು.
ಈ ಮ್ಯೂಸಿಕ್ ವಿಡಿಯೋದಲ್ಲಿ ರಂಗನಟಿ ಶ್ರೀಮತಿ ರಮಾ ಆರ್ ಕುಮಾರ್ ಅವರು ಕೇಂದ್ರ ಪಾತ್ರದಲ್ಲಿದ್ದು, ಚಿ.ಸಾಹಿತಿ ಬಿ ರಾವ್ ಭವಿಷ್ಯಕ್ಕೆ ಬೆಳಕು ನೀಡುವಂತಹ ಪಾತ್ರದಲ್ಲಿದ್ದಾರೆ. ಸಮೃದ್ಧ ದೃಶ್ಯಗಳನ್ನು ಶ್ರೀ. ಅನಿಲ್ ಕುಮಾರ್ ಚಿತ್ರೀಕರಿಸಿ ಸಂಕಲನ ಕೈಗೊಂಡಿದ್ದು, ಶ್ರೀ. ಪ್ರಶಾಂತ್ ಕೆ ಅಯ್ಯಂಗಾರ್ ನೃತ್ಯ ನಿರ್ದೇಶನ ಮಾಡಿರುತ್ತಾರೆ. ಅನಿಲ್, ಪ್ರಶಾಂತ್ ಮತ್ತು ಕೃಷ್ಣ ಸೋಮಯಾಜಿ ಅವರು ನಿರ್ದೇಶನ ಮಾಡಿರುತ್ತಾರೆ.
ಹಾಡು ಮತ್ತು ನಿರೂಪಣೆಯನ್ನು ಶ್ರೀ. ಅಭಿಲಾಷ್ ಗುಪ್ತಾ ಸಂಯೋಜಿಸಿ ಬರೆದಿರುತ್ತಾರೆ. ಈ ಹಾಡಿಗಾಗಿ ಬಾಲಿವುಡ್‍ನ ಖ್ಯಾತ ಗಾಯಕಿ ಶ್ರೀಮತಿ ಸುನೀಧಿ ಚೌಹಾಣ್ ಅವರೊಂದಿಗೆ ಕೆಲಸ ಮಾಡಲು ಅವರು ಬಹಳ ಹರ್ಷಗೊಂಡಿದ್ದಾರೆ. ಹಾಡು ಮತ್ತು ನಿರೂಪಣೆ 4 ಬೇರೆಬೇರೆ ಹಂತ(ಪಾಸ್ಟ್, ಪ್ರೆಸೆಂಟ್, ಟ್ರೇಟ್ಸ್, ಫ್ಯೂಚರ್)ಗಳಲ್ಲಿ ಈ ಮ್ಯೂಸಿಕ್ ವಿಡಿಯೋದಲ್ಲಿ ಜೊತೆಜೊತೆಗೇ ಸಾಗುತ್ತವೆ. ಅವರು ಮಾತನಾಡಿ, “ಹಾಡಿನ ಸಾಹಿತ್ಯ ರಚನೆ ಸವಾಲಿನದಾಗಿತ್ತು. ಏಕೆಂದರೆ ಸಾಮಾನ್ಯಕ್ಕಿಂತ ಭಿನ್ನವಾಗಿ ಹಗುರ ಮತ್ತು ಸೂಕ್ಷ್ಮವಾದ ಮತ್ತು ಆಲಿಸಲು ಕಿವಿಗಳಿಗೆ ಸುಲಭವಾಗಿರುವಂತಹ ನಿರೂಪಣೆ ನೀಡಲು ನಾವು ಇಚ್ಛಿಸಿದ್ದೆವು. ಭೂತಕಾಲವನ್ನು ಗುರುತಿಸುವುದರ ಜೊತೆಗೆ ವರ್ತಮಾನವನ್ನು ಸ್ವೀಕರಿಸಿ ಭವಿಷ್ಯವನ್ನು ದೃಶ್ಯೀಕರಿಸಲು ನಾವು ಇಚ್ಛಿಸಿದ್ದೆವು” ಎಂದರು.
ಎಸ್ ಆರ್‍ವಿ ಥಿಯೇಟರ್‍ನಲ್ಲಿ ಈ ವಿಡಿಯೋವನ್ನು ಪ್ರದರ್ಶಿಸಲಾಯಿತಲ್ಲದೆ, ಅಪಾರ ಪ್ರತಿಕ್ರಿಯೆ ಲಭಿಸಿತ್ತು. ಈ ವಿಡಿಯೋವನ್ನು ಬಿಡುಗಡೆ ಮಾಡಿದ ಶ್ರೀ ತೇಜಸ್ವಿ ಸೂರ್ಯ ಅವರು ಮಾತನಾಡಿ, – “ಈ ವಿಡಿಯೋ ಮತ್ತು ಅದರ ಸ್ವೀಕಾರಗಳು, ಒಬ್ಬ ವ್ಯಕ್ತಿ ನಮ್ಮ ದೇಶದ ಲಕ್ಷಾಂತರ ಹೃದಯಗಳು ಮತ್ತು ಮನಸ್ಸುಗಳ ಮೇಲೆ ಉಂಟು ಮಾಡಿರುವ ಪರಿಣಾಮವನ್ನು ದರ್ಶಿಸುತ್ತವೆ. ಸುಂದರವಾದ ಚಿಂತನೆ, ದೃಶ್ಯಗಳು ಮತ್ತು ಚಿಂತನೆಗೆ ದಾರಿ ಮಾಡುವ ವಾಕ್ಯಗಳಿಗಾಗಿ ಸೋಮಯಾಜಿ ಕ್ರಿಯೇಟಿವ್ಸ್‍ನ ಸಂಪೂರ್ಣ ತಂಡವನ್ನು ನಾನು ಅಭಿನಂದಿಸುತ್ತೇನೆ. ಇದಿ ನಿಜಕ್ಕೂ ಹೊಸ ಗಾಳಿ ಬೀಸುವಂತಿದೆ” ಎಂದರು.
Pingback: CI-CD