ಗೋಲ್ಡ್ ಸ್ಮಗ್ಲಿಂಗ್ ಸುಳಿಯಲ್ಲಿ ಸಿಲುಕಿರುವ ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ ಆಗಿದೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಬೇಲ್ ಅರ್ಜಿ ವಜಾಗೊಳಿಸಿ ತೀರ್ಪು ಪ್ರಕಟಿಸಿದೆ.
ಡಿಆರ್ಐ ಪರ ವಕೀಲ ಮಧುರಾವ್, ಪ್ರಾಥಮಿಕ ತನಿಖೆಯ ವೇಳೆ ಆರೋಪಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಮಾಡಿರುವುದು ಕಂಡುಬಂದಿದೆ. ಚಿನ್ನವನ್ನ ವಶಕ್ಕೆ ಪಡೆದುಕೊಂಡು ತನಿಖೆ ಮಾಡಲಾಗುತ್ತಿದೆ. ಮನೆ ಶೋಧ ಕಾರ್ಯದ ವೇಳೆ ಕೋಟಿ ಹಣ ಹಾಗೂ ಚಿನ್ನ ಪತ್ತೆ ಆಗಿವೆ. ಒಂದು ದೊಡ್ಡ ಸಿಂಡಿಕೇಟ್ ಕೆಲಸ ಮಾಡುತ್ತಿರುವ ಬಗ್ಗೆ ತನಿಖೆಯ ವೇಳೆ ಮಾಹಿತಿ ಲಭ್ಯವಾಗಿದೆ. ಹವಾಲ ಹಣದಲ್ಲಿ ವ್ಯವಹಾರ ಆಗಿರುವ ಬಗ್ಗೆ ಅನುಮಾನಗಳು ಇವೆ. ಪೊಲೀಸ್ ಪ್ರೋಟೊಕಾಲ್ ದುರುಪಯೋಗ ಆಗಿದ್ದು ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ರನ್ಯಾ ರಾವ್ಗೆ ಜಾಮೀನು ನೀಡಿದರೆ ತನಿಖೆಗೆ ಹಿನ್ನಡೆ ಆಗುತ್ತದೆ ಎಂದು ವಾದ ಮಾಡಿದ್ದಾರೆ.
ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ರನ್ಯಾಗೆ ಗ್ ಶಾಕ್ ಆಗಿದೆ. ರನ್ಯಾ ಪರ ವಕೀಲರು ಹೈಕೋರ್ಟ್ ನಲ್ಲಿ ಬೇಲ್ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ.
ಆರೋಪಿ ತರುಣ್ ಕೊಂಡೂರು ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಇಂದಿಗೆ ಮುಂದೂಡಿದೆ.
ದುಬೈನಿಂದ ಅಕ್ರಮವಾಗಿ ತಂದ ಚಿನ್ನವನ್ನು ರನ್ಯಾ ರಾವ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸರ್ಕಾರಿ ವಾಹನದಲ್ಲಿ ಸಾಗಿಸುತ್ತಿದ್ದರು ಎಂದು ಡಿಆರ್ಐ ತನಿಖೆ ವೇಳೆ ಬಹಿರಂಗವಾಗಿದೆ.
—-

Be the first to comment