ಅರ್ಧಕ್ಕೆ ನಿಂತು ಹೋಗಿದ್ದ ‘ಡೆವಿಲ್’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಆರಂಭವಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಮೇಲೆ ಹೊರ ಬಂದು 9 ತಿಂಗಳ ಬಳಿಕ ನಟ ದರ್ಶನ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.
‘ಡೆವಿಲ್’ ಚಿತ್ರೀಕರಣದಲ್ಲಿ ಇಂದು ಭಾಗಿಯಾಗುತ್ತಿರುವ ದರ್ಶನ್ ಶೂಟಿಂಗ್ ಮುನ್ನ ಚಾಮುಂಡೇಶ್ವರಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿದ್ದಾರೆ. ಇಲ್ಲಿ 15ರವರೆಗೆ ಶೂಟಿಂಗ್ ನಡೆಸಲು ಅನುಮತಿ ಸಿಕ್ಕಿದೆ.
ಮಾ. 14ರ ವರೆಗೆ ಸರ್ಕಾರಿ ಅತಿಥಿ ಗೃಹದಲ್ಲಿ ‘ಡೆವಿಲ್’ ಶೂಟಿಂಗ್ ನಡೆಯಲಿದೆ. ಮಾ.15ರಂದು ಲಲಿತಮಹಲ್ ಪ್ಯಾಲೇಸ್ನಲ್ಲಿ ಶೂಟಿಂಗ್ ನಡೆಯಲಿದೆ. ಖಾಸಗಿ ಭದ್ರತಾ ಪಡೆ ಹಾಗೂ ಪೊಲೀಸ್ ಪಡೆ ಎರಡನ್ನೂ ಶೂಟಿಂಗ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಡೆವಿಲ್ ಚಿತ್ರೀಕರಣ ಶುರುವಾಗುವ ಹೊತ್ತಿನಲ್ಲೇ ಆಪ್ತರಿಗೆ ಇನ್ಸ್ಟಾದಿಂದ ದರ್ಶನ್ ಕೊಕ್ ಕೊಟ್ಟಿದ್ದಾರೆ. ದರ್ಶನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಕೆಲವರನ್ನು ಫಾಲೋ ಮಾಡುತ್ತಾ ಇದ್ದರು. ಆ ಪೈಕಿ ಸುಮಲತಾ, ಅಭಿಷೇಕ್ ಅಂಬರೀಷ್, ಅಭಿ ಪತ್ನಿ ಅವಿವಾ, ಪುತ್ರ ವಿನೀಶ್, ಡಿ ಕಂಪನಿ ಇದ್ದವು. ಈಗ ಅವರು ಎಲ್ಲರನ್ನೂ ಅನ್ಫಾಲೋ ಮಾಡಿದ್ದಾರೆ. ಅವರು ಯಾರನ್ನು ಫಾಲೋ ಮಾಡದ ನಿರ್ಧಾರಕ್ಕೆ ಕಾರಣ ಏನು ಅಂತ ದರ್ಶನ್ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ.
ಸುಮಲತಾ ಅವರು ಇನ್ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ಕೊನೆ ಉಸಿರು ಇರೋವರೆಗೂ ದರ್ಶನ್ ನನ್ನ ಮಗ’ ಎಂದಿದ್ದಾರೆ.

Be the first to comment