ಮದರ್ ಇಂಡಿಯಾ ಸುಮಲತಾ ಅಂಬರೀಶ್ ಸೇರಿ ಆಪ್ತರನ್ನು ದರ್ಶನ್ ಇನ್‌ಸ್ಟಾದಿಂದ ಅನ್‌ಫಾಲೋ ಮಾಡಿದ್ದಾರೆ. ಡೆವಿಲ್ ಚಿತ್ರೀಕರಣ ಶುರುವಾಗುವ ಹೊತ್ತಿನಲ್ಲೇ ಆಪ್ತರಿಗೆ ದರ್ಶನ್ ಕೊಕ್ ಕೊಟ್ಟಿದ್ದಾರೆ.
ಇಸ್ಟಾಗ್ರಾಮ್ ಖಾತೆಯಲ್ಲಿ ದರ್ಶನ್ 6 ಜನರನ್ನು ಫಾಲೋ ಮಾಡ್ತಾ ಇದ್ದರು. ಮದರ್ ಇಂಡಿಯಾ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ಅಭಿಷೇಕ್ ಪತ್ನಿ ಅವಿವಾ, ಅಧಿಕೃತ ಫ್ಯಾನ್ಸ್ ಪೇಜ್ ಡಿ ಕಂಪೆನಿ ಮತ್ತು ಸಹೋದರ ದಿನಕರ್ ಮತ್ತು ಪುತ್ರ ವಿನೀಶ್ ಅವರನ್ನು ಫಾಲೋ ಮಾಡ್ತಿದ್ದರು. ಈಗ ಯಾರನ್ನೂ ದರ್ಶನ್ ಫಾಲೋ ಮಾಡ್ತಿಲ್ಲ. ಈಗ ಫಾಲೋ ಮಾಡುವವರ ಸಂಖ್ಯೆ 0 ಆಗಿದೆ.
ದರ್ಶನ್ ಗೆ ಮಾರ್ಚ್ 12ರಿಂದ 15ರ ವರೆಗೆ ಮೈಸೂರಿನಲ್ಲಿ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ. ಮಾ. 12ರಿಂದ ಮಾ. 14ರವರೆಗೆ ಸರ್ಕಾರಿ ಅಥಿತಿ ಗೃಹದಲ್ಲಿ ಚಿತ್ರತಂಡ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶೂಟಿಂಗ್ ಮಾಡಲಿದೆ.
ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ‘ದಿ ಡೆವಿಲ್’ ಚಿತ್ರದ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ. ಒಂದು ಪಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಯಂತೆ ಒಟ್ಟು 32 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

Be the first to comment