ನಕುಲ್ ಗೌಡ ಮತ್ತು ಮಾನ್ವಿತಾ ಕಾಮತ್ ಅಭಿನಯದ ‘BAD’ ಚಿತ್ರ ಮಾರ್ಚ್ 28ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ.
ಪಿಸಿ ಶೇಖರ್ ನಿರ್ದೇಶನದ ‘BAD’ ಚಿತ್ರದ ತಾರಾಗಣದಲ್ಲಿ ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್, ಅಶ್ವಿನಿ ಮತ್ತು ಇತರರು ಇದ್ದಾರೆ. ಆರು ನಕಾರಾತ್ಮಕ ಗುಣಲಕ್ಷಣಗಳನ್ನು (ಕಾಮ, ಕ್ರೋಧ, ಮದ, ಇತ್ಯಾದಿ) ಪ್ರತಿನಿಧಿಸುವ ಆರು ನಟರು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಾರೆ. ಚಿತ್ರಕ್ಕೆ ಎಸ್ಆರ್ ವೆಂಕಟೇಶ್ ಗೌಡ ಬಂಡವಾಳ ಹೂಡಿದ್ದಾರೆ.
ಇತ್ತೀಚೆಗಷ್ಟೇ ಚಿತ್ರತಂಡ ಕವಿರಾಜ್ ಬರೆದ ‘ನೀ ಬರುವೆ ಅಂತ’ ಎಂಬ ರೊಮ್ಯಾಂಟಿಕ್ ಹಾಡನ್ನು ಝೇಂಕಾರ್ ಮ್ಯೂಸಿಕ್ ಲೇಬಲ್ ಮೂಲಕ ಬಿಡುಗಡೆ ಮಾಡಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಹಾಡನ್ನು ‘ಸರೆಗಮಪ’ ರಿಯಾಲಿಟಿ ಶೋ ಮೂಲಕ ಹೆಸರುವಾಸಿಯಾದ ಪೃಥ್ವಿ ಭಟ್ ಹಾಡಿದ್ದಾರೆ.
ಚಿತ್ರದ ಸಂಕಲನದಲ್ಲಿ ಶೇಖರ್ ಕೆಲಸ ಮಾಡಿದ್ದಾರೆ. ‘BAD’ ಚಿತ್ರಕ್ಕೆ ಜಿ ರಾಜಶೇಖರ್ ಅವರ ಕಲಾ ನಿರ್ದೇಶನ ಮತ್ತು ಶಕ್ತಿ ಶೇಖರ್ ಅವರ ಛಾಯಾಗ್ರಹಣವಿದೆ. ಸಂಭಾಷಣೆಗಳನ್ನು ಸಚಿನ್ ಜಗದೀಶ್ವರ್ ಎಸ್ಬಿ ಬರೆದಿದ್ದಾರೆ.
—-

Be the first to comment