ಮೋಹಕತಾರೆ ರಮ್ಯಾ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ಮಾಪಕ ಇ ಕೃಷ್ಣಪ್ಪ ಅವರ ಚಿತ್ರದ ಮೂಲಕ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಮಾತುಕತೆ ಇನ್ನೂ ಆರಂಭಿಕ ಹಂತದಲ್ಲಿವೆ ಎಂದು ರಮ್ಯಾ ದೃಢಪಡಿಸಿದ್ದಾರೆ. ರಮ್ಯಾ ಅವರ ನಿರ್ಮಾಣ ಸಂಸ್ಥೆ ಆಪಲ್‌ಬಾಕ್ಸ್ ಸ್ಟುಡಿಯೋಸ್ ಕೆಲವು ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವುದರಿಂದ, ಅವರು ಶೀಘ್ರದಲ್ಲೇ ನಟಿ ಮತ್ತು ನಿರ್ಮಾಪಕಿಯಾಗಿ ಭಾಗಿಯಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ.
‘ನಟನೆಗೆ ನನ್ನ ಪುನರಾಗಮನ ಇನ್ನೂ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದಿದೆ. ನಾನು ಸಕ್ರಿಯವಾಗಿ ಸ್ಕ್ರಿಪ್ಟ್‌ಗಳನ್ನು ಕೇಳುತ್ತಿದ್ದೇನೆ ಮತ್ತು ಶೀಘ್ರದಲ್ಲೇ ಸರಿಯಾದ ಸ್ಕ್ರಿಪ್ಟ್ ಸಿಗುವ ಭರವಸೆ ಹೊಂದಿದ್ದೇನೆ’ ಎಂದು ರಮ್ಯಾ ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮಹಿಳಾ ಕೇಂದ್ರಿತ ಕಥೆಗಳು ಇಲ್ಲ ಎಂದು ನಾನು ಭಾವಿಸುತ್ತೇನೆ. ಮಹಿಳಾ ಪಾತ್ರಗಳು ಪ್ರಾಮುಖ್ಯತೆ ಪಡೆದಿರುವ ಕಥೆಗಳಲ್ಲಿ ನಾನು ಕೆಲಸ ಮಾಡಲು ಬಯಸುತ್ತೇನೆ. ಪುರುಷರು ಮತ್ತು ಮಹಿಳೆಯರನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಗ್ರಹಿಸುವಲ್ಲಿ ನಮ್ಮ ಮುಂದೆ ಷರತ್ತು ಇದೆ. ಪುರುಷರಿಗೆ ಶಕ್ತಿ ಮತ್ತು ಮಹಿಳೆಯರಿಗೆ ದುರ್ಬಲತೆ ವ್ಯಕ್ತಿತ್ವದ ಗುಣಲಕ್ಷಣಗಳನ್ನು ನೀಡಲಾಗುತ್ತದೆ. ನಾವಿದನ್ನು ಬದಲಿಸಬೇಕು’ ಎನ್ನುತ್ತಾರೆ ರಮ್ಯಾ.
ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ರಮ್ಯಾ ಕಂಬ್ಯಾಕ್ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ರಮ್ಯಾ ಆ ಚಿತ್ರಕ್ಕೆ ಸಿರಿ ರವಿಕುಮಾರ್ ಅವರನ್ನು ಸೂಚಿಸಿ ತಾವು ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡರು. ಬಳಿಕ ಡಾಲಿ ಧನಂಜಯ್ ಅಭಿನಯದ ಉತ್ತರಕಾಂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಆ ಚಿತ್ರದಿಂದಲೂ ರಮ್ಯಾ ಹೊರ ನಡೆದಿದ್ದರು.

Be the first to comment