ದುನಿಯಾ ವಿಜಯ್

ದುನಿಯಾ ವಿಜಯ್ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ

ದುನಿಯಾ ವಿಜಯ್ ,  ಸುಂದರ್ ಸಿ ನಿರ್ದೇಶನದ ಮುಂಬರುವ ‘ಮೂಕುತಿ ಅಮ್ಮನ್ 2’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

‘ಇದು ನನಗೆ ತುಂಬಾ ಭಾವನಾತ್ಮಕ ಕ್ಷಣ. ನಿರ್ದೇಶಕ ಸುಂದರ್ ಸಿ  ವೇದಿಕೆ ಮೇಲೆ ನನ್ನ ಬಗ್ಗೆ ಮಾತನಾಡಿದರು. ನಾನು ನಿರ್ದೇಶಕ ಸುಂದರ್ ಸಿ ಅವರನ್ನು ಪ್ರೀತಿಸುತ್ತೇನೆ. ಅವರು  ಚಿತ್ರತಂಡ ಮತ್ತು ತಮಿಳುನಾಡಿನ ಜನರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ’ ಎಂದು ದುನಿಯಾ ವಿಜಯ್  ಹೇಳಿದ್ದಾರೆ.

‘ನಾನು ರಜನಿಕಾಂತ್ ಸರ್ ಅವರ ದೊಡ್ಡ ಅಭಿಮಾನಿ. ಅವರನ್ನು ಭೇಟಿಯಾಗಬೇಕೆಂದು ಬಯಸಿ 30 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದೆ. ನಾನು 15 ದಿನಗಳ ಕಾಲ ಅಲ್ಲೇ ಇದ್ದೆ ಆದರೆ, ಆಗ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನಂತರ ನಾನು ಕರ್ನಾಟಕಕ್ಕೆ ಹಿಂತಿರುಗಿ ಅಲ್ಲಿ ನಟನಾದೆ. ಕೆಲವು ವರ್ಷಗಳ ನಂತರ ನಾನು ರಜನಿಕಾಂತ್ ಸರ್ ಅವರನ್ನು ಭೇಟಿಯಾದೆ. ಅವರು ನನ್ನ ಚಿತ್ರಗಳನ್ನು ನೋಡಿ  ಮೆಚ್ಚುಗೆ ಸೂಚಿಸಿದ್ದರು’ ಎಂದು ಹೇಳಿದರು.

100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಈ ಪ್ಯಾನ್-ಇಂಡಿಯಾ ಚಿತ್ರದಲ್ಲಿ ದುನಿಯಾ ವಿಜಯ್ ಅವರು  ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 5 ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ನಯನತಾರಾ  ನಟಿಯರಾದ ಊರ್ವಶಿ, ರೆಜಿನಾ ಕ್ಯಾಸಂದ್ರ, ಯೋಗಿ ಬಾಬು, ಸಿಂಗಮ್ ಪುಲಿ, ಗೋಪಿ ಅಮರನಾಥ್, ಅಭಿನಯ, ಇನಿಯಾ, ಮೈನಾ ನಂದಿನಿ, ಸ್ವಾಮಿನಾಥನ್ ಮತ್ತು ಅಜಯ್ ಘೋಷ್ ನಟಿಸಲಿದ್ದಾರೆ. ಚಿತ್ರಕ್ಕೆ ಹಿಪ್ ಹಾಪ್ ತಮಿಝಾ ಅವರ ಸಂಗೀತ ಸಂಯೋಜನೆಯಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!