Movie Review: 90ರ ದಶಕದ ಮುಗ್ಧ ಪ್ರೇಮಕಥೆ

ಚಿತ್ರ: 1990s
ನಿರ್ದೇಶಕ : ನಂದಕುಮಾರ್
ನಿರ್ಮಾಣ : ಮನಸ್ಸು ಮಲ್ಲಿಗೆ ಕಂಬೈನ್ಸ್
ಸಂಗೀತ : ಮಹಾರಾಜ
ಛಾಯಾಗ್ರಹಣ : ಹಾಲೇಶ್
ತಾರಾಗಣ : ಅರುಣ್, ರಾಣಿ ವರದ್, ಶಿವಾನಂದ. ಬಿ., ಸ್ವಪ್ನ ಶೆಟ್ಟಿಗಾರ್, ದೇವ್ ಹಾಗೂ ಮುಂತಾದವರು.
ರೇಟಿಂಗ್ : 3.5 / 5

ನಂದಕುಮಾರ್ ನಿರ್ದೇಶನದ “1990s” ಚಿತ್ರವು 90ರ ದಶಕದ ಮುಗ್ಧ ಪ್ರೇಮಕಥೆಯನ್ನು ತೆರೆದಿಡುತ್ತದೆ. ಮನಸ್ಸು ಮಲ್ಲಿಗೆ ಕಂಬೈನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಅರುಣ್ ಮತ್ತು ರಾಣಿ ವರದ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಮುನಿ (ಅರುಣ್) ಮತ್ತು ಪ್ರತಿಭಾ (ರಾಣಿ ವರದ್) ಎಂಬ ಇಬ್ಬರು ಪ್ರೇಮಿಗಳ ನಡುವೆ ನಡೆಯುವ ಕಥೆಯೇ ಈ ಚಿತ್ರವಾಗಿದೆ. ಯಾರ ಮಾತನ್ನೂ ಕೇಳದ ಹಠಮಾರಿ ಹುಡುಗ ಮುನಿ ಮತ್ತು ಮೃದು ಸ್ವಭಾವದ ಹುಡುಗಿ ಪ್ರತಿಭಾ ನಡುವಿನ ಪ್ರೇಮ, ತಳಮಳ, ಕಣ್ಸನ್ನೆಗಳ ಸಂಭಾಷಣೆ, ಆತಂಕ ಮತ್ತು ನೋವು-ನಲಿವುಗಳ ಸುತ್ತ ಕಥೆ ಸಾಗುತ್ತದೆ. 90ರ ದಶಕದ ಪ್ರೇಮಕಥೆಯ ಸೊಗಸನ್ನು ನಿರ್ದೇಶಕರು ತುಂಬಾ ಸುಂದರವಾಗಿ ತೋರಿಸಿದ್ದಾರೆ.

ನಂದಕುಮಾರ್ ಅವರು 90ರ ದಶಕದ ಪ್ರೇಮವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಜರ ಸಂಗೀತ, ಹಾಲೇಶ್ ಅವರ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಚಿತ್ರದ ಮೆರುಗು ಹೆಚ್ಚಿಸಿವೆ.

ಅರುಣ್ ಮತ್ತು ರಾಣಿ ವರದ್ ಇಬ್ಬರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅರುಣ್ ಹಠಮಾರಿ ಹುಡುಗನ ಪಾತ್ರದಲ್ಲಿ ಗಮನ ಸೆಳೆದರೆ, ರಾಣಿ ವರದ್ ಮೃದು ಸ್ವಭಾವದ ಹುಡುಗಿಯಾಗಿ ಮನೋಜ್ಞ ಅಭಿನಯ ನೀಡಿದ್ದಾರೆ. ಶಿವಾನಂದ್. ಬಿ., ಸ್ವಪ್ನ ಶೆಟ್ಟಿಗಾರ್, ದೇವ್ ಮುಂತಾದವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!