ಚಿತ್ರ: ಶಾನುಭೋಗರ ಮಗಳು
ನಿರ್ದೇಶನ: ಕೂಡ್ಲು ರಾಮಕೃಷ್ಣ
ತಾರಾಗಣ: ರಾಗಿಣಿ ಪ್ರಜ್ವಲ್, ನಿರಂಜನ್ ಶೆಟ್ಟಿ, ಕಿಶೋರ್, ರಮೇಶ್ ಭಟ್ ಇತರರು
ರೇಟಿಂಗ್: 3.5
ಬ್ರಿಟಿಷರ ವಿರುದ್ಧ ಹೋರಾಡುವ ಮಹಿಳೆಯೊಬ್ಬಳ ಕಾದಂಬರಿ ಆಧಾರಿತ ಚಿತ್ರ ಶಾನುಭೋಗರ ಮಗಳು.
ಬ್ರಿಟಿಷರ ವಿರುದ್ಧ ಸಮರ ಸಾರಿದಾಗ ಶರಾವತಿಯ ಸಹೋದರ ಬಂದೂಕಿಗೆ ಬಲಿ ಆಗುತ್ತಾನೆ. ಈ ಸೇಡನ್ನು ಶರಾವತಿ ಯಾವ ರೀತಿ ತೀರಿಸಿಕೊಳ್ಳುತ್ತಾಳೆ ಎನ್ನುವುದಕ್ಕೆ ಚಿತ್ರವನ್ನು ಮಾಡಬೇಕು.
ಕಾದಂಬರಿ ಆಧಾರಿತ ಈ ಚಿತ್ರವನ್ನು ನಿರ್ದೇಶಕರು ಸರಳವಾಗಿ ನಿರೂಪಿಸಿದ್ದಾರೆ. ಕಾಲ್ಪನಿಕ ಕಥೆಗೆ ನೈಜ ರೂಪ ಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಕಥೆಗೆ ತಕ್ಕಂತೆ ಮೇಕಿಂಗ್ ಅದ್ದೂರಿಯಾಗಿ ಮೂಡಿ ಬಂದಿದ್ದರೆ ಚಿತ್ರ ಇನ್ನಷ್ಟು ಇಷ್ಟವಾಗುವ ಸಾಧ್ಯತೆ ಇತ್ತು.
ಶರಾವತಿ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಉತ್ತಮವಾಗಿ ನಟಿಸಿದ್ದಾರೆ. ನಿರಂಜನ್ ಶೆಟ್ಟಿ, ಕಿಶೋರ್, ರಮೇಶ್ ಭಟ್ ಕಥೆಗೆ ಪೂರಕವಾಗಿ ನಟಿಸಿದ್ದಾರೆ. ಜೈ ಆನಂದ್ ಛಾಯಾಗ್ರಹಣ ಉತ್ತಮವಾಗಿ ಮೂಡಿ ಬಂದಿದೆ.
ಐತಿಹಾಸಿಕ ಹಾಗೂ ಸ್ವಾತಂತ್ರ್ಯ ಪೂರ್ವದ ಕಥೆಗಳು ಕನ್ನಡದಲ್ಲಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಶಾನುಭೋಗರ ಮಗಳು ಚಿತ್ರ ಪ್ರೇಕ್ಷಕರ ಮುಂದೆ ಬಂದಿದೆ.

Be the first to comment