ಪ್ರೀತಿ ಹಾಗೂ ತಾಯಿ ಸೆಂಟಿಮಂಟ್ ಸುತ್ತ ನಡೆಯುವ ಕಥಾಹಂದರ ಒಳಗೊಂಡ ‘ನಾನ್ ಪೋಲಿ’ ಚಿತ್ರದ ಲಿರಿಕಲ್ ಹಾಡಿನ ಬಿಡುಗಡೆ ನೆರವೇರಿತು.
ಚೇತನ್ ಅವರ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಯಾರೇ ನೀ ಯಾರೇ’ ಎಂದು ಪ್ರಾರಂಭವಾಗುವ ಈ ಹಾಡಿಗೆ ಚೇತನ್ ಮತ್ತು ಅಂಜನಾ ಪಿ.ರಾವ್ ದನಿಯಾಗಿದ್ದಾರೆ. ಈ ಹಾಡಲ್ಲಿ ನಾಯಕ ಹರೀಶ್, ದಿಶಾ ಶೆಟ್ಟಿ ಅಭಿನಯಿಸಿದ್ದಾರೆ. ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಹಲವಾರು ಮುಖಂಡರು ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಾಯಕ ಕಂ ನಿರ್ದೇಶಕ ಯಶವಂತ್ , ಮದರ್ ಸೆಂಟಿಮೆಂಟ್. ಸ್ನೇಹ ಸಂಬಂಧದ ಜತೆಗೆ ಒಂದು ಲವ್ ಸ್ಟೋರಿನೂ ಚಿತ್ರದಲ್ಲಿದೆ, ಇಡೀ ಫ್ಯಾಮಿಲಿ ಕೂತು ನೋಡುವಂಥ ಎಂಟರ್ ಟೈನರ್ ಇದು ಎಂದು ಹೇಳಿದರು.
ಯಶವಂತ್, ಹರೀಶ್, ನಾಯಕಿ ದಿಶಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರಕ್ಕೆ ನಾಯಕ ಯಶವಂತ್ ಎಂ. ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ಯ ಚಿತ್ರದ ಒಂದು ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿದ್ದು ಉಳಿದ ಸಾಂಗ್ ಹಾಗೂ ಟ್ರೈಲರನ್ನು ಆದಷ್ಟು ಬೇಗ ಚಿತ್ರತಂಡ ರಿಲೀಸ್ ಮಾಡಲಿದೆ.

Be the first to comment