‘ನಮ್ ಗಣಿ ಬಿ. ಕಾಂ ಪಾಸ್’ ಚಿತ್ರದ ಮುಂದಿನ ಭಾಗ (ಸೀಕ್ವೇಲ್) “ಗಣಿ ಬಿ. ಕಾಂ ಪಾಸ್ 2” ಚಿತ್ರ ಇಂದು ಚಿತ್ರೀಕರಣವನ್ನು ಪೂರೈಸಿ, ನಿರ್ಮಾಣೋತ್ತರ ಹಂತಕ್ಕೆ ಸಜ್ಜಾಗಿದೆ.
“ನಮ್ ಗಣಿ ಬಿ ಕಾಂ ಪಾಸ್” ಚಿತ್ರವು 2019ರಲ್ಲಿ ತೆರೆ ಕಂಡು ಕೌಟುಂಬಿಕ ಪ್ರೇಕ್ಷಕರ ಗಮನ ಸೆಳೆದಿತ್ತು. ಹಾಗಾಗಿ ಅದರ ಮುಂದಿನಭಾಗವಾದ ಈ ಚಿತ್ರವನ್ನು ಸಿನಿಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.
“ಗಣಿ ಬಿ ಕಾಂ ಪಾಸ್ 2” ಒಂದು ಫ್ಯಾಮಿಲಿ ಡ್ರಾಮಾ ಚಿತ್ರವಾಗಿದ್ದು, ಹಲವಾರು ಭಾವನೆಗಳನ್ನು, ಕೌಟುಂಬಿಕ ಮೌಲ್ಯಗಳನ್ನು ಕಥೆಯ ಮೂಲಕ ಈ ಚಿತ್ರ ಹೊರಹಾಕಲಿದೆ.
ಅಭಿಷೇಕ್ ಶೆಟ್ಟಿ ನಿರ್ದೇಶಿಸಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವಈ ಚಿತ್ರದಲ್ಲಿ ಹೃತಿಕಾ ಶ್ರೀನಿವಾಸ್, ದಿವ್ಯಾ ಸುರೇಶ್, ಸುಧಾ ಬೆಳವಾಡಿ, ಜಹಂಗೀರ್, ರಾಘು ರಾಮನಕೊಪ್ಪ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ರಾಜವಿಕ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರವನ್ನು ಬಿ.ಎಸ್ ಪ್ರಶಾಂತ್ ಶೆಟ್ಟಿ ಮತ್ತು ಪ್ರಶಾಂತ್ ರೆಡ್ಡಿ ಅದ್ವಿ ಕ್ರಿಯೇಷನ್ಸ್ ಹಾಗೂ 786 ಫಿಲಂಸ್ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ.

Be the first to comment