'ತರ್ಕ' ಸಿನಿಮಾ ಟ್ರೈಲರ್

‘ತರ್ಕ’ ಸಿನಿಮಾ ಟ್ರೈಲರ್ ರಿಲೀಸ್; ಹೇಗಿದೆ ನೋಡಿ?

‘ತರ್ಕ’ ಕನ್ನಡ ಸಿನಿಮಾ ಪ್ರೀಯರಿಗೆ ಈ ಹೆಸರು ಚಿರಪರಿಚಿತ. ಶಂಕರ್ ನಾಗ್ ಮತ್ತು ದೇವರಾಜ್ ನಟನೆಯ ಸಿನಿಮಾವಿದು. ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸಾರಥ್ಯದಲ್ಲಿ 1989 ರಲ್ಲಿ ತೆರೆಗೆ ಬಂದ ಸಿನಿಮಾ. ತರ್ಕ ಮತ್ತೆ ಚರ್ಚೆಗೆ ಬರಲು ಕಾರಣ ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ರೆಡಿಯಾಗಿ ಇದೇ ತಿಂಗಳು ಫೆಬ್ರವರಿ 28ಕ್ಕೆ ರಿಲೀಸ್‌ಗೆ ರೆಡಿಯಾಗಿದೆ. ಯುವ ಪ್ರತಿಭೆಗಳು ಸೇರಿಕೊಂಡು ತರ್ಕ ಹೆಸರಿನಲ್ಲಿ ಸಿನಿಮಾ ಮಾಡಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇಂದು ಟ್ರೈಲರ್ ರಿಲೀಸ್ ಮಾಡುವ ಮೂಲಕ ಸಿನಿಮಾತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು.

ಸಂಪೂರ್ಣ ಹೊಸಬರೆ ಸೇರಿಕೊಂಡು ಮಾಡಿರುವ ಸಿನಿಮಾವಿದು. ಅಂದಹಾಗೆ ಸುನೀಲ್ ಕುನಾರ್ ದೇಸಾಯಿ ಅಪ ತರ್ಕಕ್ಕೂ ಹೊಸ ತರ್ಕಕ್ಕೂ ಯಾವುದೇ ಸಂಬಂಧವಿಲ್ಲ. ಸದ್ಯ ರಿಲೀಸ್‌ಗೆ ರೆಡಿಯಾಗಿರುವ ತರ್ಕ ಚಿತ್ರಕ್ಕೆ ಪುನೀತ್ ಮಾನವ ಆಕ್ಷನ್ ಕಟ್ ಹೇಳಿದ್ದಾರೆ. ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಪುನೀತ್ ತರ್ಕ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. ಕ್ರೌಡ್ ಫಂಡ್ ಮೂಲಕ ಸುಮಾರು 400ಕ್ಕೂ ಅಧಿಕ ಮಂದಿ ಸಿನಿಮಾಗೆ ಬಂಡವಾಳ ಹೂಡಿರುವುದು ವಿಶೇಷ. ಗಂಧರ್ವ ಎಂಟರಪ್ರೈಸಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದೆ.

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು ಸದ್ಯ ರಿಲೀಸ್ ಆಗಿರುವ ಟ್ರೈಲರ್ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇನ್ನೂ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಂಜನ್. ನಿವಾಸ್ ಹಾಗೂ ಪ್ರತಿಭಾ ಸೇರಿದಂತೆ ಅನೇಕ ಹೊಸ ಕಲಾವಿದರೂ ಕಾಣಿಸಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಪವನ್ ಕುಮಾರ್, ನಿರ್ಮಾಪಕನಾಗಿ ಹೊಸ ಸಿನಿಮಾ, ಹೊಸ ಪಯಣ ಎಲ್ಲರ ಸಹಾಯ ಇರಲಿ, ಇಲ್ಲರೂ ಸಿನಿಮಾ ನೋಡಿ’ ಎಂದು ಹೇಳಿದರು.

ನಿರ್ದೇಶಕ ಪುನೀತ್ ಮಾನವ ಮಾತನಾಡಿ, ‘ಕ್ರೌಡ್ ಫಂಡ್ ಸಿನಿಮಾವಿದು. ಈ ಸಿನಿಮಾಗೆ ಮೊದಲು ದುಡ್ಡು ಹಾಕಿದ್ದು ಅಮ್ಮ ಮತ್ತು ಅಜ್ಜಿ. ಬಳಿಕ ಅನೇಕರು ಹಣ ಹಾಕಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ತುಂಬಾ ಚೆನ್ನಾಗಿದೆ. ಯಾರು ಊಹಿಸದ ಟ್ವಿಸ್ಟ್’ ಎಂದು ಹೇಳಿದರು.

'ತರ್ಕ' ಸಿನಿಮಾ ಟ್ರೈಲರ್

ಪ್ರಮುಖ ಪಾತ್ರದಲ್ಲಿ ನಟಿಸುರುವ ಅಂಜನ್ ಮಾತನಾಡಿ, ‘ಈ ಸಿನಿಮಾಗೆ ದುಡ್ಡು ಹೊಂದಿಸುವುದೇ ತುಂಬಾ ಕಷ್ಟವಾಗಿತ್ತು. ನಾವು ಯಾರು ಅಂತನೆ ಗೊತ್ತಿಲ್ಲ ಆದರೂ ನಮಗೆ ಅನೇಕರು ಹಣ ನೀಡಿದ್ದಾರೆ. ಸಿನಿಮಾ ಚೆನ್ನಾಗಿದೆ ಎಲ್ಲರೂ ನೋಡಿ’ ಎಂದು ಹೇಳಿದರು.

ನಾಯಕಿ ಪ್ರತಿಭಾ ಮಾತನಾಡಿ, ಈ ಸಿನಿಮಾದ ಕಥೆ ಏನು ಅಂತ ನನಗು ಸಂಪೂರ್ಣಾಗಿ ಹೇಳಿಲ್ಲ. ಕಷ್ಟ ಪಟ್ಟು ಸಿನಿಮಾ ಮಾಡಿದ್ದೇವೆ. ಸಿನಿಮಾ ನೋಡಿ’ ಎಂದರು. ಇನ್ನು ಈ ಸಿನಿಮಾಗೆ ಸೂರಜ್ ಜೋಯಿಸ್ ಸಂಗೀತವಿದ್ದು ಉಜ್ವಲ್ ಅವರು ಎಡಿಟಿಂಗ್ ಕೆಲಸ ಮಾಡಿದ್ದಾರೆ. ಇದೇ ತಿಂಗಳು 28ಕ್ಕೆ ತರ್ಕ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!