ಈ ಶುಕ್ರವಾರ ನಿರೀಕ್ಷೆ ಹುಟ್ಟಿಸಿರುವ ಕೆಲ ಸಿನಿಮಾಗಳು ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ಆದರೆ ಸ್ಟಾರ್ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ.
ವಿಷ್ಣುಪ್ರಿಯ
ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್, ಕಣ್ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿರುವ ‘ವಿಷ್ಣುಪ್ರಿಯ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಈ ಸಿನಿಮಾವನ್ನು ವಿಕೆ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಕೆ ಮಂಜು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಬಿಡುಗಡೆ ಆಗಿರುವ ಟ್ರೈಲರ್ ಮತ್ತು ಹಾಡುಗಳು ಗಮನ ಸೆಳೆದಿವೆ.
ಶ್ಯಾನುಭೋಗರ ಮಗಳು
ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ನಟನೆಯ ‘ಶ್ಯಾನುಭೋಗರ ಮಗಳು’ ಚಿತ್ರ ಬಿಡುಗಡೆ ಆಗಿದೆ. ಕಾದಂಬರಿ ಆಧರಿತ ಚಿತ್ರಕ್ಕೆ ಕೋಡ್ಲು ರಾಮಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಶ್ರೀರಂಗಪಟ್ಟಣ, ಬೆಂಗಳೂರು, ಮೇಲುಕೋಟೆ, ಚನ್ನಪಟ್ಟಣ, ಚಿಕ್ಕಬಳ್ಳಾಪುರದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.
ಭಾವ ತೀರ ಯಾನ
ಮಯೂರ ಅಂಬೇಕಲ್ಲು ಹಾಗೂ ತೇಜಸ್ ಕಿರಣ್ ನಿರ್ದೇಶನದ ‘ಭಾವ ತೀರ ಯಾನ’ ಚಿತ್ರ ಇಂದು ಬಿಡುಗಡೆ ಆಗಿದೆ. ‘ಲಕ್ಷ್ಮಿ ನಿವಾಸ’ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ನಟಿಸಿ ಮನೆಮಾತಾಗಿರುವ ಚಂದನಾ ಅನಂತಕೃಷ್ಣ ಚಿತ್ರದ ತಾರಾಗಣದಲ್ಲಿದ್ದಾರೆ. ನಿರ್ದೇಶಕ ತೇಜಸ್, ರಮೇಶ್ ಭಟ್ ಹಾಗೂ ವೀಣಾ ಚಿತ್ರದ ತಾರಾಗಣದಲ್ಲಿದ್ದಾರೆ.
ನಿಮಗೊಂದು ಸಿಹಿಸುದ್ದಿ
ಪುರುಷ ಗರ್ಭ ಧರಿಸಲು ಸಾಧ್ಯವೇ? ಇದೇ ಕಾನ್ಸೆಪ್ಟ್‌ನಲ್ಲಿ ಮಾಡಿರುವ ‘ನಿಮಗೊಂದು ಸಿಹಿಸುದ್ದಿ’ ಸಿನಿಮಾ ಇಂದು ಬಿಡುಗಡೆ ಆಗಿದೆ. ರಘು ಭಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜೊತೆಗೆ ಹೀರೊ ಆಗಿ ನಟಿಸಿದ್ದಾರೆ. ಕಾವ್ಯ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.
ಅಂಜನ್ ನಾಗೇಂದ್ರ, ವಿನಯಾ ರೈ ಇನ್ನಿತರರು ನಟಿಸಿರುವ ‘ಎಲ್ಲೋ ಜೋಗಪ್ಪ ನಿನ್ ಅರಮನೆ’, ಸೋಮ ವಿಜಯ್, ತೇಜಸ್ವಿ ರೆಡ್ಡಿ ನಟನೆಯ ‘ನಂಗೂ ಲವ್ವಾಗಿದೆ’, ಮಲ್ಲು ಜಮಖಂಡಿ ನಟನೆಯ ‘ವಿದ್ಯಾ ಗಣಪತಿ’, ‘ಒಲವಿನ ಪಯಣ’, ‘ಗಗನ ಕುಸುಮ’, ‘ನವಮಿ’ ಕನ್ನಡ ಸಿನಿಮಾಗಳು ಇಂದು ಬಿಡುಗಡೆ ಆಗಿವೆ.
—-

Be the first to comment