ಸೂಪರ್ಸ್ಟಾರ್ ರಜಿನಿಕಾಂತ್ ನಾಯಕನಾಗಿ ನಟಿಸಿರುವ ‘ಜೈಲರ್’ ಜಪಾನ್ನಲ್ಲಿ ಫೆಬ್ರುವರಿ 21ರಂದು ಬಿಡುಗಡೆಯಾಗುತ್ತಿದೆ.
ನಿರ್ದೇಶಕ ನೆಲ್ಸನ್ ಅವರ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಜಪಾನ್ನಲ್ಲಿನ ಅಭಿಮಾನಿಗಳು ತಿಳಿಸಿದ್ದಾರೆ. ಈ ಚಿತ್ರ ಬಿಡುಗಡೆಯಾದ ಬಳಿಕ ವಿಶ್ವದಾದ್ಯಂತ 650 ಕೋಟಿ ರೂ. ಗಳಿಸಿದೆ. ಸಾಗರೋತ್ತರ ವಿತರಕ ಐಂಗಾರನ್ ಇಂಟರ್ನ್ಯಾಶನಲ್ ಚಿತ್ರ ಬಿಡುಗಡೆಯಾದ ಮೊದಲ ದಿನದಲ್ಲಿಯೇ 33 ಕೋಟಿ ಗಳಿಸಿದೆ ಎಂದು ದೃಢಪಡಿಸಿದೆ. ಇದು ಸೂಪರ್ಸ್ಟಾರ್ ರಜಿನಿಕಾಂತ್ ಅವರ ವೃತ್ತಿಜೀವನದಲ್ಲಿ ಅತ್ಯಧಿಕ ಗಳಿಕೆಯಾಗಿದೆ.
ಜೈಲರ್ ಚಿತ್ರದಲ್ಲಿ ಮಲಯಾಳಂ ಸೂಪರ್ಸ್ಟಾರ್ ಮೋಹನ್ ಲಾಲ್, ಕನ್ನಡದ ಸ್ಟಾರ್ ಶಿವ ರಾಜ್ಕುಮಾರ್, ಬಾಲಿವುಡ್ ನಟ ಜಾಕಿ ಶ್ರಾಫ್, ತೆಲುಗು ನಟ ಸುನೀಲ್, ರಮ್ಯಾ ಕೃಷ್ಣನ್, ವಿನಾಯಕನ್, ಮಿರ್ನಾ ಮೆನನ್, ತಮನ್ನಾ, ವಸಂತ್ ರವಿ, ನಾಗ ಬಾಬು, ಯೋಗಿ ಬಾಬು, ಜಾಫರ್ ಸಾದಿಕ್ ಮತ್ತು ಕಿಶೋರ್ ಇದ್ದಾರೆ. ಚಿತ್ರಕ್ಕೆ ಅನಿರುದ್ಧ್ ಅವರ ಸಂಗೀತ ಮತ್ತು ವಿಜಯ್ ಕಾರ್ತಿಕ್ ಕಣ್ಣನ್ ಅವರ ಛಾಯಾಗ್ರಹಣವಿದೆ.
ಸನ್ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ ಬ್ಲಾಕ್ಬಸ್ಟರ್ನ ಸೀಕ್ವೆಲ್ ನ್ನು ಘೋಷಿಸಿದೆ. ಭಾಗ 1 ರಂತೆ, ಜೈಲರ್ 2 ಚಿತ್ರಕ್ಕೆ ಅನಿರುದ್ಧ್ ಸಂಗೀತ ಮತ್ತು ನೆಲ್ಸನ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ.
—-

Be the first to comment