ಕಂಟ್ರಿ ಮೇಡ್‌ ಚಾರಿ ಫಸ್ಟ್‌ಲುಕ್

ಪುಷ್ಪಕ ವಿಮಾನದಂತಹ ವಿಭಿನ್ನ ಶೈಲಿಯ ಸಿನಿಮಾ ಮೂಲಕ ಅಪ್ಪ ಮಗಳ ಬಾಂಧವ್ಯ ತೋರಿಸಿ ಸ್ಯಾಂಡಲ್‌ವುಡ್ ವೀಕ್ಷಕರ ಮನಸ್ಸು ಗೆದ್ದ ನಿರ್ದೇಶಕ ಎಸ್ ರವೀಂದ್ರನಾಥ್ ಮತ್ತೆ ಬರ್ತಿದ್ದಾರೆ. ಈ ಬಾರಿ ಅವರು ಬರ್ತಿರೋದು ಕಂಟ್ರಿ ಮೇಡ್ ಚಾರಿ ಚಿತ್ರದ ಮೂಲಕ. ಈ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ರಿಲೀಸ್ ಮಾಡಿದೆ ಚಿತ್ರತಂಡ.

ಕ್ಯಾಚಿ ಟೈಟಲ್ ಇರೋ ಚಿತ್ರದ ಪೋಸ್ಟರ್‌ ಕೂಡ ಗಮನ ಸೆಳೆಯುವಂತಿದೆ. ಚಿತ್ರ ಔಟ್ ಅಂಡ್ ಔಟ್ ಮಾಸ್ ಆಕ್ಷನ್ ಥ್ರಿಲ್ಲರ್ ಆಗಿರಲಿದ್ದು ಸದ್ಯ ಚಿತ್ರದ ನಾಯಕ ಯಾರು ಅನ್ನೋದೇ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಇನ್ನು ನುರಿತ ತಾಂತ್ರಿಕವರ್ಗ ಚಿತ್ರಕ್ಕೆ ಕೆಲಸ ಮಾಡ್ತಿದೆ. ನೂರೊಂದು ನೆನಪು ಖ್ಯಾತಿಯ ಎಸ್.ಕೆ. ರಾವ್ ಕಂಟ್ರಿ ಮೇಡ್ ಚಾರಿ ಚಿತ್ರಕ್ಕೆ ಛಾಯಾಗ್ರಹಣ ಮಾಡ್ತಿದ್ದಾರೆ. ಟಚ್ ಬೇರ್ ಸ್ಟುಡಿಯೋಸ್ ಬ್ಯಾನರ್ ನಡಿಯಲ್ಲಿ ಸುಶೀಲ್ ಸತ್ಯರಾಜ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

This Article Has 1 Comment
  1. Pingback: binance отзывы

Leave a Reply

Your email address will not be published. Required fields are marked *

Translate »
error: Content is protected !!