‘ನಾಗವಲ್ಲಿ ಬಂಗಲೆ’ ಚಿತ್ರ ಫೆಬ್ರವರಿ 28 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರಕ್ಕೆ ಕವಿ ರಾಜೇಶ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನೇವಿ ಮಂಜು, ನೆ.ಲ. ನರೇಂದ್ರ ಬಾಬು, ತೇಜಸ್ವಿನಿ, ರೂಪಶ್ರೀ, ಯಶವಂತ್ ಕುಮಾರ್, ಸಿಮ್ರಾನ್, ಪ್ರೇರಣಾ, ಮಾನಸ ಗೌಡ, ಶ್ವೇತಾ, ರಂಜಿತಾ ಗೌಡ, ಸುಷ್ಮಾ ನಟಿಸಿದ್ದಾರೆ.
ನಾಗವಲ್ಲಿ ಬಂಗಲೆಯ ಕಥೆಯನ್ನು ಜೆಎಂ ಪ್ರಹ್ಲಾದ್ ಬರೆದಿದ್ದಾರೆ. ‘ಕಥೆಯು ‘ಅರಿಷಡ್ವರ್ಗಗಳನ್ನು’ ಸಂಕೇತಿಸುವ ಆರು ಪ್ರಮುಖ ಪಾತ್ರಗಳ ಸುತ್ತ ಸುತ್ತುತ್ತದೆ. ಕಾಮ , ಕ್ರೋಧ , ಲೋಭ , ಮೋಹ, ಮದ ಮತ್ತು ಮಾತ್ಸರ್ಯ ಇವುಗಳ ಸುತ್ತ ಸುತ್ತುತ್ತದೆ. ಈ ದುರ್ಗುಣಗಳನ್ನು ಮೀರಿದ ಏಳನೇ ಪಾತ್ರವೂ ಇದೆ. ಇದು ಶಕ್ತಿಯುತ ಸಂದೇಶವನ್ನು ನೀಡುತ್ತದೆ.
ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಲಾಂಚ್ ಮಾಡಿದೆ. ಸಮಾರಂಭದಲ್ಲಿ ಶಾಸಕ ಅಶ್ವತ್ಥ್ ನಾರಾಯಣ್, ಹಿರಿಯ ನಿರ್ಮಾಪಕ ಎಸ್‌ಎ ಚಿನ್ನೇಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹಂಸ ವಿಷನ್ಸ್ ಬ್ಯಾನರ್ ಅಡಿಯಲ್ಲಿ ಈ ಯೋಜನೆಗೆ ನಿರ್ಮಾಪಕರಾದ ನೆಲ ಮಹೇಶ್ ಮತ್ತು ನೇವಿ ಮಂಜು ಕೈಜೋಡಿಸಿದ್ದಾರೆ. ರೋಹನ್ ದೇಸಾಯಿ ಸಂಗೀತವಿದೆ.
—–

Be the first to comment