ಚಿತ್ರ: ರಾಜು ಜೇಮ್ಸ್ ಬಾಂಡ್
ನಿರ್ದೇಶನ: ದೀಪಕ್ ಮಧುವನಹಳ್ಳಿ
ನಿರ್ಮಾಣ: ಕಿರಣ್, ಮಂಜುನಾಥ್
ತಾರಾ ಬಳಗ: ಗುರು ನಂದನ್, ಮೃದುಲಾ, ಚಿಕ್ಕಣ್ಣ, ಅಚ್ಚುತ್ ಕುಮಾರ್, ಸಾಧು ಕೋಕಿಲ, ರವಿ ಶಂಕರ್, ತಬಲ ನಾಣಿ ಇತರರು
ರೇಟಿಂಗ್: 3.5
ಎಂಎಲ್ಎ ಒಬ್ಬನ ಬ್ಯಾಂಕಿನಲ್ಲಿ ಇಟ್ಟ 25 ಕೋಟಿ ರೂಪಾಯಿಯ ದರೋಡೆಯ ಸುತ್ತ ನಡೆಯುವ ಪತ್ತೆದಾರಿ ಸಿನಿಮಾ ರಾಜು ಜೇಮ್ಸ್ ಬಾಂಡ್.
ಫಸ್ಟ್ ರ್ಯಾಂಕ್ ರಾಜು , ರಾಜು ಕನ್ನಡ ಮೀಡಿಯಂ ಖ್ಯಾತಿಯ ಗುರುನಂದನ್ ಇಲ್ಲಿ ಆಕ್ಷನ್ ರೋಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ ಅವತಾರದಲ್ಲಿ ಅವರು ಡ್ಯಾನ್ಸ್ ಹಾಗೂ ಫೈಟ್ ಗಳಲ್ಲಿ ಗಮನ ಸೆಳೆಯುತ್ತಾರೆ.
ಬ್ಯಾಂಕಿನಲ್ಲಿಟ್ಟ ಹಣ ಕದ್ದವರು ಯಾರು? ಇದನ್ನು ಕದ್ದ ಉದ್ದೇಶ ಏನು ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ನಾಯಕಿ ಮೃದುಲ ಟೀಚರ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಎಂಎಲ್ಎ ಪಾತ್ರದಲ್ಲಿ ರವಿಶಂಕರ್ ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರನ್ನು ನಗಿಸುತ್ತಾರೆ. ವೃತ್ತಿಪರ ಕಳ್ಳನ ಪಾತ್ರದಲ್ಲಿ ಸಾಧುಕೋಕಿಲ, ಜ್ಯೋತಿಷಿಯ ಪಾತ್ರದಲ್ಲಿ ತಬಲಾ ನಾಣಿ ಗಮನ ಸೆಳೆಯುತ್ತಾರೆ.
ಅನುಪ್ ಸೀಳಿನ್ ಸಂಗೀತ ಹಿತವಾಗಿದೆ. ಇನ್ನಷ್ಟು ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಸೇರಿಸಿದ್ದರೆ ಚಿತ್ರ ಪ್ರೇಕ್ಷಕರನ್ನು ಇನ್ನಷ್ಟು ಹಿಡಿದಿಡುತ್ತಿತ್ತು. ಆದರೂ ಮನರಂಜನೆಯ ದೃಷ್ಟಿಯಿಂದ ರಾಜು ಜೇಮ್ಸ್ ಬಾಂಡ್ ಇಷ್ಟವಾಗುತ್ತದೆ.

Be the first to comment