ಯುಗಾದಿ ಹಬ್ಬದಂದು ಶ್ರೀಮಂತ ಹಾಡು

ಜಗತ್ತಿನಲ್ಲಿ ಅತಿ ಹೆಚ್ಚು ಶ್ರೀಮಂತನಾಗಿರುವುದು ರೈತ. ಸಮಾಜದ ಚಕ್ರವರ್ತಿಗಳು, ಸರ್ಕಾರಗಳು, ಬಂಡವಾಳಶಾಹಿಗಳು ಎಲ್ಲರು ಇವರ ಮೇಲೆ ಅವಲಂಬಿತರಾಗಿದ್ದಾರೆ. ಅದರಿಂದಲೇ ಇವರನ್ನು ‘ಶ್ರೀಮಂತ’ ಅಂತ ಕರೆಯುತ್ತಾರೆ. ಈಗ ಇದೇ ಹೆಸರಿನ ಮೇಲಿನ ಸಿನಿಮಾವೊಂದು ಹಾಸನ, ಕೊಳ್ಳೇಗಾಲ, ಮಂಡ್ಯಾ ಕಡೆಗಳಲ್ಲಿ ಶೇಕಡ 80ರಷ್ಟು ಚಿತ್ರೀಕರಣವನ್ನು ಮುಗಿಸಿ, ಕ್ಲೈಮಾಕ್ಸ್, ಎರಡು ಹಾಡುಗಳನ್ನು ಬಾಕಿ ಉಳಿಸಿಕೊಂಡಿದ್ದು, ಅದನ್ನು ಸದ್ಯದಲ್ಲೆ ಮುಗಿಸಲು ತಂಡವು ಯೋಜನೆ ಹಾಕಿಕೊಂಡಿದೆ. ಅನ್ನದಾತನು ಶೀರ್ಷಿಕೆಯಂತೆ ಆದರೆ ಜಗತ್ತೇ ಶ್ರೀಮಂತದಿಂದ ಇರಬಹುದು ಎಂಬುದನ್ನು ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಟೈಟಲ್‍ಗೆ ಅರ್ಥ ಹಬ್ಬ, ಉತ್ಸವ, ಜಾತ್ರೆ, ಸಂತೋಷ, ಸಂಭ್ರಮ. ಎಲ್ಲವು ಬಂದಿರೋದು ಇದರಿಂದಲೇ, ಇವರಿಂದಲೇ ಅಂತ ಹೇಳ ಹೊರಟಿದ್ದಾರೆ. ಕತೆ,ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನ ಮಾಡಿರುವುದು ಹಾಸನ್‍ರಮೇಶ್.
ನಾಯಕನಾಗಿ ಕ್ರಾಂತಿ, ಬಾಂಬೆಮೂಲದ ವೈಷ್ಣವಿಪಟವರ್ಧನ್, ವೈಷ್ಣವಿಚಂದ್ರನ್ ನಾಯಕಿಯರು. ಇವರೊಂದಿಗೆ ಚರಣ್‍ರಾಜ್, ರಮೇಶ್‍ಭಟ್, ರಾಜುತಾಳಿಕೋಟೆ, ಕಲ್ಯಾಣಿ, ಗಿರಿ, ಸಾಧುಕೋಕಿಲ, ಕುರಿರಂಗ ಮುಂತಾದವರು ಅಭಿನಯಿಸುತ್ತಿದ್ದಾರೆ. ಒಂಬತ್ತು ಹಾಡುಗಳಿಗೆ ಸಾಹಿತ್ಯ, ಸಂಗೀತ ಸಂಯೋಜಿಸಿರುವುದು ನಾದಬ್ರಹ್ಮ ಹಂಸಲೇಖಾ. ಛಾಯಾಗ್ರಹಣ ವಿಷ್ಣುವರ್ಧನ-ರವಿಕುಮಾರ್‍ಸನ, ನೃತ್ಯ ಮದನ್-ಹರಿಣಿ, ಸಾಹಸ ಮಾಸ್‍ಮಾದ, ಸಂಕಲನ ಕೆ.ಎಂ.ಪ್ರಕಾಶ್ ಅವರದಾಗಿದೆ. ವರ್ತರು ಕಡೆಯ ಜಿ.ನಾರಾಯಣಪ್ಪ ನಿರ್ಮಾಪಕರಾಗಿ ಮೊದಲ ಅನುಭವ.
ಯುಗಾದಿ ಅಂದರೆ ಹೊಸತನ ಹಬ್ಬುವ ದಿನ. ಆ ದಿನದಂದೇ ಎಸ್.ಬಿ.ಬಾಲಸುಬ್ರಮಣ್ಯಂ ಹಾಡಿರುವ ‘ರೈತ ನಮ್ಮ ಬಾಳಿನ ಭಾಗ್ಯವಿದಾತ’ ಎನ್ನುವ ಒಂದು ಗೀತೆಯನ್ನು ಡಾ.ಹಂಸಲೇಖಾ ನಾಡಿಗೆ ಅರ್ಪಿಸಿ ತಂಡಕ್ಕೆ ಶುಭವಾಗಲೆಂದು ಹಾರೈಸಿದರು.

This Article Has 1 Comment
  1. Pingback: sexual orientation in the united states military a history

Leave a Reply

Your email address will not be published. Required fields are marked *

Translate »
error: Content is protected !!