ಚಿತ್ರ: ಸಿದ್ಲಿಂಗು 2
ನಿರ್ದೇಶನ: ವಿಜಯ ಪ್ರಸಾದ್
ತಾರಾ ಬಳಗ: ಯೋಗಿ, ವಿಜಯಪ್ರಸಾದ್, ಸೋನು ಗೌಡ, ಸುಮನ್ ರಂಗನಾಥ್ ಇತರರು
ರೇಟಿಂಗ್: 3.5/5
2012ರಲ್ಲಿ ಬಿಡುಗಡೆಯಾದ ಸಿದ್ಲಿಂಗು ಚಿತ್ರದ ಮುಂದುವರಿದ ಭಾಗ ಈ ವಾರ ತೆರೆಗೆ ಬಂದಿರುವ ಸಿನಿಮಾ ಸಿದ್ಲಿಂಗು 2.
ಸಿದ್ಲಿಂಗು ಕಥೆಯಲ್ಲಿ ಪೂರ್ಣಗೊಳ್ಳದ ನಾಯಕನ ಹಳೇ ಕಾರಿನ ಖರೀದಿಯ ಕನಸು ಇಲ್ಲಿ ಮುಂದುವರೆದಿದೆ. ಕಾರು ಖರೀದಿ ಮಾಡುವ ನಾಯಕನ ಆಸೆ ಈಡೇರುತ್ತದೆಯಾ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಈ ಚಿತ್ರದಲ್ಲಿ ನಾಯಕ ಇಷ್ಟಪಟ್ಟ ಕಾರು ಹಾಗೂ ಮಂಗಳ ಟೀಚರ್ ಕಾಣಸಿಗುವುದಿಲ್ಲ. ಆದರೆ ಮತ್ತೆ ಅವನ ಜೀವನದಲ್ಲಿ ಹಳೆಯ ಕಾರು ಕಂಡು ಬರುತ್ತದೆ. ಈ ಕಾರು ಪಡೆಯಲು ಮಾಡುವ ಹೋರಾಟದ ಕಥೆ ಚಿತ್ರದಲ್ಲಿದೆ.
ಸಿದ್ಲಿಂಗು ಚಿತ್ರದಲ್ಲಿನ ಪಾತ್ರಗಳು ಇಲ್ಲಿ ಮುಂದುವರೆದಿವೆ. ಇದರ ಜೊತೆಗೆ ನಿರ್ದೇಶಕರು ಸೀತಮ್ಮ, ನಿವೇದಿತಾ ಟೀಚರ್, ವಿಶಾಲು, ಲಾಯರ್ ಮೊದಲಾದ ಹೊಸ ಪಾತ್ರಗಳನ್ನು ಪರಿಚಯಿಸಿದ್ದಾರೆ. ಅಲ್ಲದೇ ನಿರ್ದೇಶಕರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ವಿಜಯ ಪ್ರಸಾದ್ ಇಲ್ಲಿ ಯಾವುದೇ ದ್ವಂದ್ವಾರ್ಥದ ಸಂಭಾಷಣೆಗಳನ್ನು ಬರೆದಿಲ್ಲ. ಈ ಕಾರಣಕ್ಕೆ ಅವರು ಪ್ರೇಕ್ಷಕರ ಚಪ್ಪಾಳೆಗೆ ಪಾತ್ರರಾಗುತ್ತಾರೆ. ಮೊದಲ ಭಾಗದ ಕಥೆಯನ್ನು ಸಮರ್ಥವಾಗಿ ನಿರ್ದೇಶಕರು ಈ ಸಿನಿಮಾದಲ್ಲಿ ತೆಗೆದುಕೊಂಡು ಹೋಗಿದ್ದಾರೆ.
ಯೋಗಿ ಅಭಿನಯಕ್ಕೆ ಫುಲ್ ಮಾರ್ಕ್ಸ್ ಸಿಗುತ್ತದೆ. ಅವರು ಪಾತ್ರಕ್ಕೆ ಜೀವ ತುಂಬುವ ಕೆಲಸವನ್ನು ಮಾಡಿದ್ದಾರೆ. ಸೀತಾ ಕೋಟೆ, ಪದ್ಮಜಾ ರಾವ್, ಸೋನು ಗೌಡ, ಸುಮನ್ ರಂಗನಾಥ್ ತಮ್ಮ ಅಭಿನಯದ ಮೂಲಕ ಇಷ್ಟವಾಗುತ್ತಾರೆ. ಹಾಡುಗಳು ಹಾಗೂ ಛಾಯಾಗ್ರಹಣ ಸಿನಿಮಾಕ್ಕೆ ಪೂರಕವಾಗಿದೆ. ಭಾವುಕವಾದ ಈ ಚಿತ್ರ ಪ್ರೇಕ್ಷಕರಿಗೆ ಒಳ್ಳೆಯ ಅನುಭವ ನೀಡುತ್ತದೆ.

Be the first to comment