1990's

ಫೆ.28ರಂದು ‘1990’s’ ಚಿತ್ರ ಬಿಡುಗಡೆ

ನಂದಕುಮಾರ್ ಸಿಎಂ ನಿರ್ದೇಶನದ “1990’s” ಚಿತ್ರ  ಫೆ.28ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರವನ್ನು ಮನಸ್ಸು ಮಲ್ಲಿಗೆ ಕಂಬೈನ್ಸ್ ನಿರ್ಮಾಣ ಮಾಡಿದೆ. 90ರ ದಶಕದಲ್ಲಿ ನಡೆಯುವ ಲವ್ ಸ್ಟೋರಿ ಇದಾಗಿದೆ. “1990’s” ಚಿತ್ರದಲ್ಲಿ  ಅರುಣ್ ಮತ್ತು ರಾಣಿ ವಾರದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಡಾ. ನಾ ಸೋಮೇಶ್ವರ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಡಾ. ನಾ ಸೋಮೇಶ್ವರ್ ಅವರು ಚಿತ್ರದ ಸಂಗೀತ ಮತ್ತು ದೃಶ್ಯಗಳನ್ನು ಶ್ಲಾಘಿಸಿದರು.  ಇಂದ್ರಜಿತ್ ಲಂಕೇಶ್ ಅವರು ‘ಟ್ರೇಲರ್ ಅದ್ಭುತವಾಗಿ ಕಾಣುತ್ತದೆ. ಚಿತ್ರವು ಅಷ್ಟೇ ಪ್ರಭಾವಶಾಲಿಯಾಗಲಿದೆ ಎಂದು ನನಗೆ ಖಾತ್ರಿಯಿದೆ’ ಎಂದರು.

ನಿರ್ದೇಶಕ ನಂದಕುಮಾರ್ ಸಿಎಂ ಮಾತನಾಡಿ, ‘ಶೀರ್ಷಿಕೆ ಸೂಚಿಸುವಂತೆ 90ರ ದಶಕದಲ್ಲಿ ನಡೆಯುವ ಪ್ರೇಮಕಥೆಯನ್ನು ಚಿತ್ರ ಹೇಳುತ್ತದೆ. ಆದರೆ  ಇದು ಸಾಂಪ್ರದಾಯಿಕ ಪ್ರೇಮಕಥೆಯನ್ನು ಮೀರಿದ್ದಾಗಿದೆ. ಇದು ಎಲ್ಲಾ ವಯಸ್ಸಿನ ವೀಕ್ಷಕರನ್ನು ಸೆಳೆಯುವ ಎಲ್ಲ ಅಂಶಗಳನ್ನು ಒಳಗೊಂಡಿದೆ’ ಎಂದು ತಿಳಿಸಿದ್ದಾರೆ.

ಚಿತ್ರಕ್ಕೆ ಸಿಗುತ್ತಿರುವ ಗಣ್ಯರ ಬೆಂಬಲಕ್ಕೆ ನಿರ್ಮಾಪಕ ಅರುಣ್ ಕುಮಾರ್ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!