ಮಾರ್ಚ್ 20, 2009ರಂದು ಚಂದನವನಕ್ಕೆ ‘ವೀರ ಮದಕರಿ’ ಚಿತ್ರದ ಮೂಲಕ ರಾಗಿಣಿ ಎನ್ನುವ ಸುಂದರ ಹುಡುಗಿಯೊಬ್ಬಳ ಪ್ರವೇಶವಾಯಿತು. ನೋಡು ನೋಡುತ್ತಿದ್ದಂತೆ ಅವರು ಸಿನಿ ಪಯಣದಲ್ಲಿ ಯಶಸ್ವಿಯಾಗಿ ಹತ್ತು ವರ್ಷಗಳನ್ನು ಮುಗಿಸಿದ್ದಾರೆ. ನಟಿಸಿದ್ದು 20+. ಇದರಲ್ಲಿ ಮಲೆಯಾಳಂ-3, ತಮಿಳು-2 ಮತ್ತು ತೆಲುಗು-1 ಖಾತೆಯಲ್ಲಿ ಸೇರಿಕೊಂಡಿದೆ. ಇವುಗಳಲ್ಲಿ ಹಿಟ್, ಫ್ಲಾಪ್ ಆಗಿದ್ದು ಉಂಟು. ಹಾಗಂತ ಇದರ ಬಗ್ಗೆ ಚಿಂತನೆ ಮಾಡದೆ ಒಳ್ಳೆಯದನ್ನು ಆರಿಸಿತ್ತಾ, ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಮುಂಬರುವ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಬದುಕಿನಲ್ಲಿ ಕಷ್ಟ, ಸುಖಕ್ಕಿಂತ ಹೆಚ್ಚು ಸಂತಸವನ್ನು ಅನುಭವಿಸುದ್ದು ಇವರ ಖುಷಿಗೆ ಕಾರಣವಾಗಿದೆಯಂತೆ. ಪ್ರಾರಂಬದಲ್ಲಿ ಸಣ್ಣಗಿದ್ದು, ಮುಂದೆ ದಪ್ಪ, ಈಗ ಸಪೂರಿಯಾಗಿ ಕಾಣಿಸಿಕೊಂಡು ನಾಯಕಿಗೆ ಅರ್ಹತೆವುಳ್ಳಂತೆ ಚೆಂದ ಕಾಣಿಸುತ್ತಿದ್ದಾರೆ. ನಾಯಕಿ ಪ್ರಧಾನ ಚಿತ್ರಗಳಲ್ಲಿ ಹೆಚ್ಚು ಅವಕಾಶ ಸಿಕ್ಕಿರುವುದು, ಮತ್ತು ಇವರ ಹೆಸರಿನ ‘ರಾಗಿಣಿ ಐಪಿಎಸ್’ ಮಾಸ್ ಸಿನಿಮಾವೊಂದು ತೆರೆಕಂಡು ನಿರ್ಮಾಪಕರಿಗೆ ಬಂಡವಾಳ ವಾಪಸ್ಸು ಬಂದಿರುವುದು ಮತ್ತೋಂದು ಅದೃಷ್ಟವಂತೆ.
ಲೆಕ್ಕಚಾರ ಹಾಕಿ ಚಿತ್ರರಂಗಕ್ಕೆ ಬಂದವಳಲ್ಲ. ಬಂದಂತ ಕರೆಗಳಿಗೆ ಸಹಿ ಹಾಕಿದ್ದರೆ ವರ್ಷಪೂರ್ತಿ ಬ್ಯುಸಿ ಇರಬಹುದಿತ್ತು. ಒಳ್ಳೆ ಕತೆ, ನಿರ್ಮಾಣ, ನಿರ್ದೇಶಕ ಇವುಗಳು ಇದ್ದರೆ ಸಹಿ ಹಾಕುತ್ತಾ, ಸದ್ಯ ‘ಗಾಂಧಿಗಿರಿ’ ಶರಣ್‍ರೊಂದಿಗೆ ‘ಅಧ್ಯಕ್ಷ ಇನ್ ಅಮೇರಿಕಾ’ದಲ್ಲಿ ನಟಿಸುತ್ತಿದ್ದಾರೆ. ಇನ್ನು ಎರಡು ಚಿತ್ರಗಳು ಮಾತುಕತೆ ಹಂತದಲ್ಲಿದೆ. ಕೆಲವರಿಗೆ ಬೇಜಾರು ಮಾಡಬಾರದೆಂಬ ದೃಷ್ಟಿಯಿಂದ ಐಟಂ ಹಾಡಿಗೆ ಹೆಜ್ಜೆ ಹಾಕಲಾಗಿತ್ತು. ವಿವಾದಗಳಲ್ಲಿ ನಿಮ್ಮ ಹೆಸರು ಮುಂಚೂಣಿಯಲ್ಲಿದೆ ಅಂತ ಕೇಳಿದರೆ ಅವರಿಂದ ಬಂದ ಉತ್ತರ ಹೀಗಿತ್ತು:
ಸಮಾಜದಲ್ಲಿ ಸೆಲಬ್ರಿಟಿ ಅಂತ ಗುರುತಿಸಿಕೊಂಡರೆ, ಏನು ಮಾಡಿದರೂ ಸುದ್ದಿಯಾಗುತ್ತದೆ. ನಮಗೂ ಖಾಸಗಿ ಬದುಕು ಅಂತ ಇದೆ. ಯಾರೋ ಅವಿವೇಕಿಗಳು ಹೇಳಿದ ತಕ್ಷಣ ನಾನೇಕೇ ಸ್ಪಷ್ಟನೆ ನೀಡಬೇಕು. ಯಾರದು ತಪ್ಪು ಎಂಬುದನ್ನು ನ್ಯಾಯಲಯವು ತೀರ್ಮಾನಿಸುತ್ತದೆ. ಇದರ ಬಗ್ಗೆ ಹೆಚ್ಚಿನದೇನು ಹೇಳಲು ಇಷ್ಟಪಡುವುದಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ಮುಂದೆ ತಂದಾಗ, ಅದಕ್ಕೂ ನನಗೂ ಯಾವುದೇ ಸಂಬಂದವಿಲ್ಲವೆಂದು ಕಡ್ಡಿ ತುಂಡು ಮಾಡಿದಂತೆ ಖಾರವಾಗಿ ಪ್ರತಿಕ್ರಿಯಿಸಿದ್ದೇನೆ, ಅಲ್ಲದೆ ನನ್ನ ವಾದವು ಅದೇ ಆಗಿದೆ.
ಮೂಲತ: ಕ್ರೀಡಾಪಟುವಾಗಿದ್ದರಿಂದ, ಕ್ರೀಡೆ ಕುರಿತ ಚಿತ್ರವೊಂದರಲ್ಲಿ ನಟಿಸಬೇಕೆಂಬ ಮನದಾಳದ ಪಸೆಯನ್ನು ಹೊರಗೆ ಹಾಕಿದ್ದಾರೆ.
Pingback: good dumps