ಚಿತ್ರ: ಗಜರಾಮ
ನಿರ್ದೇಶನ: ಸುನಿಲ್ ಕುಮಾರ್
ತಾರಾ ಬಳಗ: ರಾಜವರ್ಧನ್, ತಪಸ್ವಿನಿ ಪೂಣಚ್ಚ, ರಾಗಿಣಿ, ಶರತ್ ಲೋಹಿತಾಶ್ವ ಇತರರು
ರೇಟಿಂಗ್: 3.5
ಲವ್ ಸ್ಟೋರಿ ಜೊತೆಗೆ ಕುಸ್ತಿ ಪಟುವಿನ ಆಕ್ಷನ್ ಲೈಫ್ ಸ್ಟೋರಿಯ ಚಿತ್ರ ಈ ವಾರ ತೆರೆಗೆ ಬಂದಿರುವ ಗಜರಾಮ.
ಕಟ್ಟು ಮಸ್ತಾದ ಯುವಕ ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಾನೆ. ಯುವಕನ ಶಕ್ತಿ ಸಾಮರ್ಥ್ಯವನ್ನು ಅರಿತ ಅದೇ ಊರಿನ ಉಸ್ತಾದ್ ಯುವಕನನ್ನು ಕುಸ್ತಿಪಟುವಾಗಿ ರೂಪಿಸಲು ಮುಂದಾಗುತ್ತಾನೆ. ಪ್ರೀತಿಯಲ್ಲಿದ್ದ ಯುವಕ ಕುಸ್ತಿಪಟು ಆಗುತ್ತಾನೆಯೇ? ಅವನಿಗೆ ಪ್ರೀತಿ ಸಿಗುತ್ತದೆಯೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ನಿರ್ದೇಶಕರು ಕಮರ್ಷಿಯಲ್ ಸಿನಿಮಾಗೆ ಬೇಕಾದ ಕಥೆಯನ್ನು ಆಯ್ದುಕೊಂಡಿದ್ದಾರೆ. ರಾಜ ವರ್ಧನ್ ಕಮರ್ಷಿಯಲ್ ಸಿನಿಮಾದ ನಟನಿಗೆ ಬೇಕಾದ ಮೈಕಟ್ಟು , ಲುಕ್ ಹೊಂದಿದ್ದಾರೆ. ಅವರು ಹಳ್ಳಿಯ ಯುವಕ ಹಾಗೂ ಪೈಲ್ವಾನ್ ಆಗಿ ಎರಡು ಶೇಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕಿ ತಪಸ್ವಿನಿಗೆ ಎರಡು ಶೇಡ್ ನ ಪಾತ್ರವಿದೆ. ಶರತ್ ಲೋಹಿತಾಶ್ವ ತಮ್ಮ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ.
ನಿರ್ದೇಶಕರು ಉತ್ತಮ ತಂತ್ರಜ್ಞರನ್ನು ಹಾಗೂ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಾಗಿಣಿ ದ್ವಿವೇದಿ ಅವರು ಐಟಂ ಸಾಂಗ್ ಒಂದರಲ್ಲಿ ಜೋರಾಗಿ ಹೆಜ್ಜೆ ಹಾಕಿದ್ದಾರೆ.
ಆಕ್ಷನ್ ಚಿತ್ರ ಇಷ್ಟಪಡುವವರಿಗೆ ಗಜರಾಮ ಚಿತ್ರ ಇಷ್ಟ ಆಗಬಹುದು.
![](https://bcinemas.in/wp-content/uploads/2020/11/whatsapp.png)
Be the first to comment