ಅಧಿಪತ್ರ

Movie Review: ಮರ್ಡರ್ ಮಿಸ್ಟ್ರಿ ಕಥೆಯ ಅಧಿಪತ್ರ

ಚಿತ್ರ: ಅಧಿಪತ್ರ
ನಿರ್ದೇಶನ: ಚಯನ್ ಶೆಟ್ಟಿ
ನಿರ್ಮಾಣ: ಕೆ ಆರ್ ಸಿನಿ ಕಂಬೈನ್ಸ್
ಪಾತ್ರವರ್ಗ: ರೂಪೇಶ್ ಶೆಟ್ಟಿ, ಜಾಹ್ನವಿ , ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮ್ಮಿನಾಡು ಇತರರು
ರೇಟಿಂಗ್: 3.5

ತುಳು ನಾಡಿನ ಸೊಗಡನ್ನು ಹೊಂದಿ ಇದರ ಜೊತೆಗೆ ಮರ್ಡರ್ ಮಿಸ್ಟರಿ ಕಥೆ ಹೊಂದಿರುವ ಚಿತ್ರ ಅಧಿಪತ್ರ.

ಬಿಗ್ ಬಾಸ್ ವಿಜೇತ ರೂಪೇಶ್ ಶೆಟ್ಟಿ ಅವರು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನಾಥಾಶ್ರಮದಲ್ಲಿ ಬೆಳೆದ ಹುಡುಗ ಪೊಲೀಸ್ ಅಧಿಕಾರಿಯಾಗಿ ತನ್ನ ತಂದೆ ತಾಯಿಗಳನ್ನು ಹುಡುಕಲು ತೊಡಗಿದಾಗ ಏನಾಗುತ್ತದೆ ಎನ್ನುವುದಕ್ಕೆ ಈ ಚಿತ್ರವನ್ನು ನೋಡಬೇಕಿದೆ.

ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ರೂಪೇಶ್ ಶೆಟ್ಟಿ ಕೊಲೆಯ ರಹಸ್ಯವನ್ನು ಬೇಧಿಸಲು ಹೊರಡುತ್ತಾರೆ. ಚಿತ್ರದ ಕ್ಲೈಮಾಕ್ಸ್ ಇದರಲ್ಲೇ ಅಡಗಿದೆ.

ತುಳು ನಾಡಿನ ಭೂತಕೋಲದ ಕಥೆ ಇರುವ ಕಾರಣ ಇಲ್ಲಿ ಕಾಂತಾರ ಹಾಗೂ ವಿಕ್ರಾಂತ್ ರೋಣ ಚಿತ್ರದ ಛಾಯೆಗಳು ಕಂಡು ಬರುತ್ತವೆ. ಇದು ಚಿತ್ರಕ್ಕೆ ಧನಾತ್ಮಕ ಹಾಗೂ ಋಣಾತ್ಮಕ ಆಗಿ ಕಂಡು ಬಂದಿದೆ. ಚಿತ್ರದಲ್ಲಿ ಹಾಸ್ಯ ಇದೆ. ಕೊನೆಯವರೆಗೂ ಚಿತ್ರ ಕುತೂಹಲ ಕಾಯ್ದುಕೊಳ್ಳುವಂತೆ ನಿರ್ದೇಶಕರು ನಿರೂಪಣೆ ಮಾಡಿದ್ದಾರೆ. ರೆಟ್ರೋ ಕಾಲದಲ್ಲಿ ಚಿತ್ರ ನಡೆಯುವುದು. ಇದಕ್ಕೆ ಪೂರಕವಾಗಿ ನಿರ್ದೇಶಕರು ಮೇಕಿಂಗ್ ಮಾಡಿದ್ದಾರೆ.

ಲವರ್ ಬಾಯ್ ಲುಕ್ ನಲ್ಲಿ ಇರುವ ರೂಪೇಶ್ ಶೆಟ್ಟಿಗೆ ತನಿಖೆಯ ಪಾತ್ರ ಮಾತ್ರ ಇದೆ. ಅವರಿಗೆ ಯಾವುದೇ ಲವ್ ಸ್ಟೋರಿ ಇಲ್ಲ. ಪತ್ರಕರ್ತೆಯಾಗಿ ಜಾಹ್ನವಿ ಕಾಣಿಸಿಕೊಂಡಿದ್ದಾರೆ. ದೀಪಕ್ ರೈ ಪಾಣಾಜೆ, ರಘು ಪಾಂಡೇಶ್ವರ್ ಖಳ ಪಾತ್ರದಲ್ಲಿ ಮಿಂಚಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!