ದರ್ಶನ್

ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದ ದರ್ಶನ್

ನಟ ದರ್ಶನ್‌ ಆರೋಗ್ಯ ಸಮಸ್ಯೆಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದು ಅಭಿಮಾನಿಗಳಿಗೆ ವಿಡಿಯೋ ಮೂಲಕ ಹೇಳಿದ್ದಾರೆ.

ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ ಹೇಳಲಾಥ್ಯಾಂಕ್ಸ್ ಹೇಳೋದಾ ನೀವೆಲ್ಲರೂ ಕೊಟ್ಟಿರುವ ಪ್ರೀತಿಗೆ ಏನು ಹೇಳಿದ್ರೂ ಕಮ್ಮಿನೇ. ಅದನ್ನು ಹೇಗೆ ಹಿಂದಿರುಗಿಸಿ ಕೊಡೋದು ನನಗೆ ಗೊತ್ತಾಗುತ್ತಿಲ್ಲ. ಆದರೆ ಇದೇ ಫೆ.16ಕ್ಕೆ ನನ್ನ ಹುಟ್ಟುಹಬ್ಬ. ಪ್ರತಿಯೊಬ್ಬರಿಗೂ ಭೇಟಿಯಾಗಿ ಥ್ಯಾಂಕ್ಸ್ ಹೇಳೋಣ ಅಂತ ಆಸೆ ಇತ್ತು. ನನ್ನ ಆರೋಗ್ಯ ಸಮಸ್ಯೆಯಿಂದ ತುಂಬಾ ಹೊತ್ತು ನಿಂತುಕೊಳ್ಳೋಕೆ ಆಗಲ್ಲ. ಹಾಗಾಗಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದು  ದರ್ಶನ್ ಹೇಳಿದ್ದಾರೆ.

ನಿಂತುಕೊಂಡು ಎಲ್ಲರಿಗೂ ವಿಶ್ ಮಾಡೋಕೆ ನನ್ನ ಕೈಯಲ್ಲಿ ಆಗಲ್ಲ. ಒಂದು ಇಂಜೆಕ್ಷನ್ ತೆಗೆದುಕೊಂಡಾಗ ಒಂದು 15ರಿಂದ 20 ದಿನ ಆರಾಮ ಆಗಿರುತ್ತೇನೆ. ಅದರ ಪವರ್ ಕಮ್ಮಿಯಾಗುತ್ತಿದ್ದಂತೆ ನೋವು ಶುರುವಾಗುತ್ತದೆ. ಆಪರೇಷನ್ ಅನ್ನೋದು ಕಟ್ಟಿಟ್ಟ ಬುಟ್ಟಿ. ಅದು ನನಗೂ ಗೊತ್ತು. ಅದನ್ನು ಮುಂದೆ ಮಾಡಿಸಲೇಬೇಕು. ಈಗ ಇರೋ ಕೆಲಸಗಳಲ್ಲಿ ಈಗಾಗಲೇ ಒಪ್ಪಿಕೊಂಡಿರೋದನ್ನು ಮಾಡಬೇಕಿದೆ. ನನ್ನ ನಿರ್ಮಾಪಕರಿಗೆ ಥ್ಯಾಂಕ್ಯೂ ಹೇಳ್ತೀನಿ. ಯಾಕೆಂದರೆ ಇಷ್ಟು ದಿನ ನನಗಾಗಿ ಕಾದಿದ್ದಾರೆ. ಅವರಿಗೆ ನಾನು ಅನ್ಯಾಯ ಮಾಡಬಾರದು ಅಂತ ಎಷ್ಟು ದಿನ ಸಾಧ್ಯವಾಗುತ್ತದೋ ಅಷ್ಟು ದಿನ ಆಪರೇಷನ್ ಮುಂದಕ್ಕೆ ಹಾಕಲು ನೋಡ್ತಾ ಇದ್ದೀನಿ. ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕ್ಷಮೆ ಇರಲಿ ಎಂದು ಮನವಿ ಮಾಡಿದ್ದಾರೆ.

ನಾನು 3 ಜನರಿಗೆ ಥ್ಯಾಂಕ್ಸ್ ಹೇಳಬೇಕು. ಧನ್ವೀರ್ ಯಾವಾಗಲೂ ಪಾಪ ನನ್ನ ಜೊತೆಯಲಿಯೇ ಇರುತ್ತಿದ್ದರು. ನನ್ನ ದೊಡ್ಡ ಬೆಂಬಲವಾಗಿ ನಿಂತರು. ‘ಬುಲ್ ಬುಲ್’ ರಚಿತಾ ರಾಮ್‌ಗೂ ಥ್ಯಾಂಕ್ಯೂ. ನನ್ನ ಪ್ರಾಣ ಸ್ನೇಹಿತೆ ಆಗಿರುವ ರಕ್ಷಿತಾಗೂ ಥ್ಯಾಂಕ್ಸ್. ನನ್ನ ಎಲ್ಲಾ ಸೆಲೆಬ್ರಿಟಿಗಳು ಧನ್ಯವಾದಗಳು ಎಂದು  ಹೇಳಿದ್ದಾರೆ.

ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. 101% ಹೌದು ನಾನು ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ದುಡ್ಡು ವಾಪಸ್ ಕೊಟ್ಟಿದ್ದೇನೆ. ನನ್ನ ಹತ್ತಿರ ಸಿನಿಮಾಗೆ ಬರುವಾಗಲೇ ಸಿಕ್ಕಾಪಟ್ಟೆ ಕಮಿಟ್‌ಮೆಂಟ್ ಇತ್ತು. ಹಾಗಾಗಿ ವಾಪಸ್ ಕೊಟ್ಟೆ. ಮುಂದೆ ನಾವಿಬ್ಬರೂ ಸಿನಿಮಾ ಮಾಡೇ ಮಾಡ್ತೀವಿ.  ನನ್ನ ಸಿನಿಮಾಳು ಡಬ್ ಆಗಿ ಬೇರೆಕಡೆ ಹೋದರೆ ಅದು ಬೇರೆ ಥರ ಆಗುತ್ತದೆ. ಯಾವಾಗಲೂ ನಾನು ಕನ್ನಡ ಸಿನಿಮಾನೇ ಮಾಡೋದು ಎಂದಿದ್ದಾರೆ ದರ್ಶನ್‌.

Be the first to comment

Leave a Reply

Your email address will not be published. Required fields are marked *

Translate »
error: Content is protected !!