ದರ್ಶನ್ ಜೊತೆ ಅಭಿನಯಿಸಿದ್ದ, ನವಗ್ರಹ ಸಿನಿಮಾದ ಮೂಲಕ ಖ್ಯಾತಿಯನ್ನು ಗಳಿಸಿದ್ದ ನಟ ಗಿರಿ ದಿನೇಶ್ ಅವರು ನಿಧನರಾಗಿದ್ದಾರೆ.
ಗಿರಿ ದಿನೇಶ್ ಅವರು ಶುಕ್ರವಾರ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು. ಹೃದಯಾಘಾತದಿಂದ ಗಿರಿ ದಿನೇಶ್ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರ ಅಂತ್ಯಸಂಸ್ಕಾರ ಇಂದು ನೆರವೇರಲಿದೆ.
ಗಿರಿ ದಿನೇಶ್ ಅವರು ಚಮಕಾಯ್ಸಿ ಚಿಂದಿ ಉಡಾಯ್ಸಿ, ವಜ್ರ ಸೇರಿ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ನವಗ್ರಹ ಚಿತ್ರದ ಶೆಟ್ಟಿ ಪಾತ್ರ ಹೆಚ್ಚಿನ ಹೆಸರು ತಂದುಕೊಟ್ಟಿತ್ತು. ಮೈಸೂರು ದಸರಾದ ಚಿನ್ನದ ಅಂಬಾರಿಯನ್ನು ಕದಿಯುವ ಈ ಸಿನಿಮಾದಲ್ಲಿ ಕಳ್ಳ ಪಾತ್ರವನ್ನು ದಿನೇಶ್ ನಿಭಾಯಿಸಿದ್ದರು. ಸಿನಿಮಾವನ್ನು ದರ್ಶನ್ ಅವರ ಸೋದರ ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದರು.
ದರ್ಶನ್ ಜೊತೆ ತರುಣ್ ಸುಧೀರ್, ವರ್ಷಾ, ಧರ್ಮ ಕೀರ್ತಿರಾಜ್, ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ಗಿರಿ ದಿನೇಶ್, ನಾಗೇಂದ್ರ ಅರಸ್, ಶರ್ಮಿಳಾ ಮಾಂಡ್ರೆ ಮುಂತಾದವರು ನವಗ್ರಹ ಸಿನಿಮಾದಲ್ಲಿ ನಟಿಸಿದ್ದರು.

Be the first to comment