ನಟ ಸೋನು ಸೂದ್ ಅವರ ವಿರುದ್ಧ 10 ಲಕ್ಷ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲುಧಿಯಾನಾ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದೆ.
ಲುಧಿಯಾನಾದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ಅವರ ವಿರುದ್ಧ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ 10 ಲಕ್ಷ ರೂಪಾಯಿ ಮೋಸ ಮಾಡಿದ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ಸೋನು ಸೂದ್ ಅವರು ಸಾಕ್ಷಿ ಹೇಳಬೇಕಿತ್ತು. ಆದರೆ ಅವರು ಸಮನ್ಸ್ ನೀಡಿದ ಹೊರತಾಗಿಯೂ ಕೋರ್ಟ್ಗೆ ಹಾಜರಾಗಿಲ್ಲ. ಅವರ ವಿರುದ್ಧ ಬಂಧನದ ವಾರಂಟ್ ಜಾರಿ ಆಗಿದೆ.
ಮುಂಬೈ ನಿವಾಸಿ ಸೋನು ಸೂದ್ ಅವರನ್ನು ಬಂಧಿಸಿ ಕೋರ್ಟ್ ಎದುರು ತಂದು ನಿಲ್ಲಿಸಬೇಕು ಎಂದು ಲುಧಿಯಾನಾ ಕೋರ್ಟ್ ಮುಂಬೈ ಪೊಲೀಸರಿಗೆ ಸೂಚನೆ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 10ರಂದು ಇದೆ.
ಸೋನು ಸೂದ್ ಅವರು ಕೊವಿಡ್ ಬಳಿಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾ ಇದ್ದಾರೆ. ಅವರಿಗೆ ಈಗ ಬಂಧನದ ಭೀತಿ ಶುರುವಾಗಿದೆ.
ಸೋನು ಸೂದ್ ಅವರು ಕನ್ನಡದಲ್ಲಿ ‘ವಿಷ್ಣುವರ್ಧನ’ ಚಿತ್ರದಲ್ಲಿ ಆದಿಶೇಷ ಹೆಸರಿನ ಖಡಕ್ ವಿಲನ್ ಪಾತ್ರ ಮಾಡಿದ್ದರು.

Be the first to comment