ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದ ನಟ ವಿನಯ್ ಗೌಡ ಬಲರಾಮನ ದಿನಗಳು” ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಎದುರು ಖಳನಾಗಿ ಎಂಟ್ರಿ ಕೊಟ್ಟಿದ್ದಾರೆ.
ಕೆ.ಎಂ ಚೈತನ್ಯ “ಬಲರಾಮನ ದಿನಗಳು” ಸಿನಿಮಾ ಕೈಗೆತ್ತಿಕೊಂಡು, ಒಂದಷ್ಟು ಶೂಟಿಂಗ್ ಮುಗಿಸಿದ್ದಾರೆ. “ಆ ದಿನಗಳು” ಸಿನಿಮಾ ಬಳಿಕ ಬೆಂಗಳೂರು ಭೂಗತಲೋಕದ ಮತ್ತೊಂದು ರಕ್ತಚರಿತ್ರೆಯ ಕಥೆಯನ್ನು ಕೆ. ಎಂ ಚೈತನ್ಯ ಈ ಸಿನಿಮಾದಲ್ಲಿ ಮುಂದುವರಿಸಲಿದ್ದಾರೆ.
“ಬಲರಾಮನ ದಿನಗಳು ಚಿತ್ರದ ಪ್ರಡ್ಯೂಸರ್ ಶ್ರೇಯಸ್ ನನ್ನನ್ನು ಬಿಗ್ ಬಾಸ್‌ನಲ್ಲಿ ನೋಡಿದ್ದರು. ಕತ್ತಿ ಅನ್ನೋ ಪಾತ್ರಕ್ಕೆ ವಿನಯ್ ಅವರೇ ಸೂಕ್ತ. ವಿನೋದ್ ಪ್ರಭಾಕರ್ ಅವರ ಎದುರು ಹೀರೋ ಸರಿಸಮ ಪಾತ್ರಬೇಕು ಎಂದು ನಿರ್ದೇಶಕ ಚೈತನ್ಯ ಅವರಿಗೆ ನನ್ನನ್ನು ರೆಫರ್ ಮಾಡಿದರು. ನಿರ್ದೇಶಕರೂ ನನ್ನನ್ನು ಒಪ್ಪಿಕೊಂಡರು” ಎನ್ನುತ್ತಾರೆ ವಿನಯ್ ಗೌಡ.
”ಈಗಾಗಲೇ ಶೇ. 50 ಭಾಗದ ಚಿತ್ರೀಕರಣ ಮುಗಿದಿದೆ. ಮೇಜರ್ ಫೈಟ್ ಸೀಕ್ವೆನ್ಸ್ ಇವೆ. ಅದು ಮುಗಿದರೆ ಸಿನಿಮಾ ಮುಗಿದಂತೆ” ಎಂದು ವಿನಯ್ ಗೌಡ ಮಾತನಾಡಿದ್ದಾರೆ.
“ಬಲರಾಮನ ದಿನಗಳು” ಚಿತ್ರವನ್ನು ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ನಿರ್ಮಾಣ ಮಾಡುತ್ತಿದ್ದಾರೆ.
—-

Be the first to comment