ಕಿಚ್ಚ ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷಾ’ ಚಿತ್ರದ ಶೂಟಿಂಗ್ ಮಾರ್ಚ್ ಮೂರನೇ ವಾರದಲ್ಲಿ ಆರಂಭವಾಗುವ ನಿರೀಕ್ಷೆಯಿದೆ.
ಅನೂಪ್ ಭಂಡಾರಿ ನಿರ್ದೇಶನದ ಚಿತ್ರಕ್ಕಾಗಿ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದೆ. 8 ಎಕರೆ ಜಾಗದಲ್ಲಿ ವಿದೇಶಿ ಶೈಲಿಯ ಸೆಟ್‌ಗಳನ್ನು ನಿರ್ಮಿಸಲಾಗಿದೆ. ಕಲಾ ನಿರ್ದೇಶಕ ಶಿವಕುಮಾರ್ ಸೆಟ್ ಹಾಕುವ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸುದೀಪ್ ಶೀಘ್ರವೇ ‘ಬಿಲ್ಲ ರಂಗ ಬಾಷಾ’ ಚಿತ್ರದ ಕೆಲಸಗಳಲ್ಲಿ ಶೀಘ್ರವೇ ತೊಡಗಿಕೊಳ್ಳಲಿದ್ದಾರೆ.
ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಈ ಮೊದಲು ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇದಾದ ಬಳಿಕ ‘ಬಿಲ್ಲ ರಂಗ ಬಾಷಾ’ ಚಿತ್ರದ ಕೆಲಸಗಳಲ್ಲಿ ಇವರು ತೊಡಗಿಕೊಳ್ಳಬೇಕಿತ್ತು. ಕಾರಣಾಂತರಗಳಿಂದ ಸಿನಿಮಾದ ಕೆಲಸ ವಿಳಂಬ ಆಗಿದೆ. ಸುದೀಪ್ ಅವರು ಮುಂದಿನ ಕೆಲ ವಾರ ಸಿಸಿಎಲ್ನಲ್ಲಿ ಬ್ಯುಸಿ ಇರಲಿದ್ದಾರೆ. ಅವರು ‘ಕರ್ನಾಟಕ ಬುಲ್ಡೋಜರ್ಸ್’ ಪರ ಆಟ ಆಡುತ್ತಿದ್ದಾರೆ. ಆ ಬಳಿಕ ‘ಬಿಲ್ಲ ರಂಗ ಬಾಷಾ’ ಸಿನಿಮಾ ಕೆಲಸಗಳಲ್ಲಿ ಸುದೀಪ್ ತೊಡಗಿಕೊಳ್ಳಲಿದ್ದಾರೆ.
‘ಬಿಲ್ಲ ರಂಗ ಬಾಷಾ’ ಚಿತ್ರದ ಶೇ. 70ರಷ್ಟು ಶೂಟ್ ಸೆಟ್ನಲ್ಲೇ ಸಾಗಲಿದೆ. ಮಾರ್ಚ್ ಮೂರನೇ ವಾರದಿಂದ ಬಿಲ್ಲ ರಂಗ ಬಾಷಾ ಶೂಟಿಂಗ್ ಆರಂಭ ಆಗುವ ನಿರೀಕ್ಷೆಯಿದೆ. ಸುದೀಪ್ ಅವರು ಇದಕ್ಕಾಗಿ ದಪ್ಪ ಆಗುತ್ತಿದ್ದಾರೆ.
—-

Be the first to comment