ದರ್ಶನ್ ಗೆ ಪುಷ್ಪಾ-2

ದರ್ಶನ್ ಗೆ ಪುಷ್ಪಾ-2 ಚಿತ್ರದ ನಿರ್ದೇಶಕ ಆಕ್ಷನ್ ಕಟ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪುಷ್ಪಾ 2 ಖ್ಯಾತಿಯ ನಿರ್ದೇಶಕ ಸುಕುಮಾರ್ ಅವರು ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತರಾಗಿರುವ ದರ್ಶನ್ ಅವರ ಇಮೇಜ್ ನ್ನು ಗಮನದಲ್ಲಿಟ್ಟುಕೊಂಡು ಸುಕುಮಾರ್  ಚಿತ್ರಕಥೆಯನ್ನು ಹೆಣೆದಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ತೆಲುಗು ಪ್ರೊಡಕ್ಷನ್ ಹೌಸ್ ನ ಬ್ಯಾನರ್ ನಲ್ಲಿ ನಿರ್ಮಿಸಲಿದ್ದಾರೆ ಎನ್ನಲಾಗಿದೆ.

ದರ್ಶನ್ ಹಾಗೂ ಸುಕುಮಾರ್ ಅವರ ಕಾಂಬಿನೇಶನ್ ನಲ್ಲಿ ಬರುವ ಚಿತ್ರ  ಬಾಕ್ಸ್ ಆಫೀಸ್ ನಲ್ಲಿ ಹೊಸ ಇತಿಹಾಸವನ್ನು ಬರೆಯುವುದು ಗ್ಯಾರಂಟಿ ಎನ್ನಲಾಗಿದೆ.   ಗಾಂಧೀ ನಗರದಲ್ಲಿ ಹರಡಿರುವ ಈ ಸುದ್ದಿ  ಖಚಿತವಾಗಬೇಕಿದೆ.  ಈ ಸುದ್ದಿ ನಿಜವಾದಲ್ಲಿ ಅಭಿಮಾನಿಗಳ ಸಂತೋಷಕ್ಕೆ   ಪಾರವೇ ಇಲ್ಲ ಎನ್ನಬಹುದು.

ಅಲ್ಲು ಅರ್ಜುನ್ ಅವರ ಪುಷ್ಪ 2 ಸಿನಿಮಾ  1,800 ಕ್ಕೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.   ಈ ಸಿನಿಮಾ   ಬಾಹುಬಲಿ ಸಿನಿಮಾ  ಹಿಂದಿಕ್ಕಿ ದಾಖಲೆ ಬರೆದಿದೆ. ಅದ್ಧೂರಿ ಸಿನಿಮಾ ನಿರ್ದೇಶಿಸಿದ ಸುಕುಮಾರ್ ಭಾರತದಲ್ಲಿಯೇ ಬಹು ಬೇಡಿಕೆಯ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!