ನೆಟ್ಫ್ಲಿಕ್ಸ್ ಗ್ಲೋಬಲ್ ಟಾಪ್ 10 ಟ್ರೆಂಡಿಂಗ್ನಲ್ಲಿ ‘ಪುಷ್ಪ 2’ ಸಿನಿಮಾ ಸ್ಥಾನ ಪಡೆದುಕೊಂಡಿದೆ.
ವಿಶ್ವಾದ್ಯಂತ 1800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ‘ಪುಷ್ಪ 2’ ಒಟಿಟಿಯಲ್ಲಿ ಮಿಂಚುತ್ತಿದೆ. ಭಾರತ ಮಾತ್ರವಲ್ಲದೇ ವಿದೇಶದಲ್ಲಿ ಇರುವ ಪ್ರೇಕ್ಷಕರು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ.
ಸಿನಿಮಾದ ಒಟಿಟಿ ಪ್ರಸಾರದ ಹಕ್ಕುಗಳನ್ನು ನೆಟ್ಫ್ಲಿಕ್ಸ್ ಪಡೆದುಕೊಂಡಿದೆ. ಜನವರಿ 30ರಿಂದ ಒಟಿಟಿಯಲ್ಲಿ ‘ಪುಷ್ಪ 2’ ಸ್ಟ್ರೀಮ್ ಆಗುತ್ತಿದೆ. ನೆಟ್ಫ್ಲಿಕ್ಸ್ ಗ್ಲೋಬಲ್ ಟಾಪ್ 10 ಟ್ರೆಂಡಿಂಗ್ನಲ್ಲಿ ‘ಪುಷ್ಪ 2’ ಸಿನಿಮಾ ಸ್ಥಾನ ಪಡೆದುಕೊಂಡಿದೆ.
ಚಿತ್ರಮಂದಿರದಲ್ಲಿ ಪ್ರೇಕ್ಷಕರು ನೋಡಿಲ್ಲದೇ ಇರುವ ಕೆಲವು ತುಣುಕುಗಳನ್ನು ಸೇರಿಸಿ ಒಟಿಟಿಯಲ್ಲಿ ‘ಪುಷ್ಪ 2’ ಬಿಡುಗಡೆ ಮಾಡಲಾಯಿತು. ಹೆಚ್ಚುವರಿ 23 ನಿಮಿಷಗಳ ದೃಶ್ಯಗಳನ್ನು ನೋಡಲು ಅನೇಕರು ಆಸಕ್ತಿ ತೋರಿಸಿದ್ದಾರೆ. ಈ ಕಾರಣದಿಂದ ಒಟಿಟಿಯಲ್ಲಿ ಸಿನಿಮಾದ ವೀಕ್ಷಣೆ ಹೆಚ್ಚಾಗಿದೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಪಾಸಿಲ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಸುಕುಮಾರ್ ಅವರು ‘ಪುಷ್ಪ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ನಟನೆ, ಅದ್ದೂರಿ ಆ್ಯಕ್ಷನ್ ದೃಶ್ಯಗಳನ್ನು ನೋಡಿ ಪ್ರೇಕ್ಷಕರು ಮನಸೋತಿದ್ದಾರೆ. ಸಿನಿಮಾದ ಗೆಲುವಿನಿಂದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜನಪ್ರಿಯತೆ ಜಾಸ್ತಿ ಆಗಿದೆ.

Be the first to comment