ನಿರ್ಮಾಣ ಹಂತದಲ್ಲಿರುವ ‘Your’s Sincerely ರಾಮ್’ ಚಿತ್ರದ ಮೂಲಕ ನಟಿ ಮೀರಾ ಜಾಸ್ಮಿನ್ ಕನ್ನಡ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಚಿತ್ರತಂಡ ಮೀರಾ ಜಾಸ್ಮಿನ್ ಅವರ ಪಾತ್ರದ ಬಗ್ಗೆ ಆರಂಭಿಕ ಚರ್ಚೆಗಳನ್ನು ನಡೆಸಿದೆ. ಅವರನ್ನು ಕನ್ನಡ ಚಿತ್ರರಂಗಕ್ಕೆ ಮರಳಿ ಕರೆತರುವ ಕೆಲಸ ಮಾಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದ ಬಳಿಕ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ.
ರಾಯಲ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸಿರುವ ಚಿತ್ರದಲ್ಲಿ ರಮೇಶ್ ಅರವಿಂದ್ ಮತ್ತು ಗಣೇಶ್ ಅವರು ನಟಿಸಿದ್ದಾರೆ. ಚಿತ್ರಕ್ಕೆ ವಿಖ್ಯಾತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
Yours Sincerely ರಾಮ್ ಕಥೆಯು ಅನೇಕ ಯುಗಗಳನ್ನು ವ್ಯಾಪಿಸಿದೆ. ಚಿತ್ರಕ್ಕೆ ನವೀನ್ ಕುಮಾರ್ ಅವರ ಛಾಯಾಗ್ರಹಣ, ಜೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಇದೆ. ನಿರ್ಮಾಣ ಹಂತದಲ್ಲಿರುವ ಚಿತ್ರಕ್ಕೆ ಇತ್ತೀಚೆಗೆ ಜನಪ್ರಿಯ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬೆಂಗಳೂರಿನಲ್ಲಿ ಹಾಡೊಂದರ ಚಿತ್ರೀಕರಣ ನಡೆಸಿದ್ದರು.
‘Your’s Sincerely ರಾಮ್’ ಚಿತ್ರತಂಡ ವಿಶೇಷವಾಗಿ ವಿನ್ಯಾಸಗೊಳಿಸಿದ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದೆ. ಪೋಸ್ಟರ್ ಲ್ಲಿ ಇಬ್ಬರು ನಟರು ಬೈಸಿಕಲ್ ಸವಾರಿ ಮಾಡುತ್ತಿದ್ದಾರೆ. ಈ ಹಿಂದೆ ಸೈನಿಕರ ನಡುವೆ ವಿಧೂಷಕರ ಪೋಸ್ಟರ್ ರಿಲೀಸ್ ಮಾಡಲಾಗಿತ್ತು.
Be the first to comment