AVR ENTERTAINER

ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ಮಾಣ ಸಂಸ್ಥೆ ಎಂಟ್ರಿ

ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಆಶಯದೊಂದಿಗೆ ಬೆಂಗಳೂರಿನ ಉದ್ಯಮಿಯಾಗಿ ಅರವಿಂದ್ ವೆಂಕಟೇಶ್ ರೆಡ್ಡಿ ತಮ್ಮದೇ AVR ENTERTAINER ಎಂಬ ಬ್ಯಾನರ್ ಪ್ರಾರಂಭಿಸಿದ್ದಾರೆ. ಈ ಬ್ಯಾನರ್ ನಡಿ ಏಕಕಾಲಕ್ಕೆ ಎರಡು ಸಿನಿಮಾಗಳನ್ನು ಘೋಷಣೆ ಮಾಡಲಾಗಿದೆ. AVR ENTERTAINER ನಿರ್ಮಾಣದ ಚೊಚ್ಚಲ ಚಿತ್ರಕ್ಕೆ ಸಿಂಪಲ್ ಸುನಿ ಸಾರಥಿ.

ಕನ್ನಡ ಚಿತ್ರರಂಗದ ಭರವಸೆ ನಿರ್ದೇಶಕರಾಗಿರುವ ಸಿಂಪಲ್ ಸುನಿ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅರವಿಂದ್ ವೆಂಕಟೇಶ್ ರೆಡ್ಡಿ ನಿರ್ಮಾಣದಲ್ಲಿ ರಿಚಿ ರಿಚ್ ಎಂಬ ಟೈಟಲ್ ಸಿನಿಮಾ ಘೋಷಣೆಯಾಗಿದೆ. ಸುನಿ ಸಾರಥ್ಯದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ನಾಯಕ. ರಿದ್ದೇಶ್ ಚಿನ್ನಯ್ಯ ಎಂಬ ಪಾತ್ರದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ. ಫನ್, ಫ್ಯಾಮಿಲಿ ಜೊತೆಗೆ ಎಮೋಷನಲ್ ಅಂಶಗಳನ್ನು ಬ್ಲೆಂಡ್ ಮಾಡಿ ಕಥೆಯನ್ನು ಸುನಿ ಕಟ್ಟಿಕೊಟ್ಟಿದ್ದಾರೆ. ರಿಚಿ ರಿಚ್ ಸಿನಿಮಾಗೆ ವೀರ್ ಸಮರ್ಥ್ ಸಂಗೀತ ನಿರ್ದೇಶನ, ಅಭಿಲಾಷ್ ಕಳತ್ತಿ ಛಾಯಾಗ್ರಹಣವಿರಲಿದೆ.

AVR ENTERTAINER ಬ್ಯಾನರ್ ನಡಿ ಬರ್ತಿರುವ ಎರಡನೇ ಸಿನಿಮಾಗೆ ಸುಜಯ್ ಶಾಸ್ತ್ರಿ ನಿರ್ದೇಶಕರು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರಗಳನ್ನು ನಿರ್ದೇಶಿಸಿರುವ ಸುಜಯ್ ಈ ಬಾರಿ ಕ್ರೀಡಾ ಕಥೆಯನ್ನು ಹರವಿಡೋದಿಕ್ಕೆ ಹೊರಟಿದ್ದಾರೆ. ಪುಟ್ಭಲ್ ಕಥಾಹಂದರಯುಳ್ಳ ಈ ಚಿತ್ರದ ನಾಯಕ ಯಾರು? ಅನ್ನೋದನ್ನು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಡಲಾಗಿದೆ. ಟೀಂ ರೆಡಿ ಇದೆ. ಕೋಚ್ ಯಾರು ಅನ್ನೋದನ್ನು ಸ್ಪಲ್ಪ ದಿನದಲ್ಲೇ ಹೇಳೋದಾಗಿ ಚಿತ್ರತಂಡ ತಿಳಿಸಿದೆ. ಅರವಿಂದ್ ವೆಂಕಟೇಶ್ ರೆಡ್ಡಿ ನಿರ್ಮಾಣದ ಈ ಎರಡು ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!