ಮಹಾ ಕುಂಭಮೇಳದಲ್ಲಿ ತಮ್ಮ ನೇತ್ರಗಳಿಂದ ಎಲ್ಲರನ್ನೂ ಮೋಡಿ ಮಾಡಿದ್ದ ಮೊನಾಲಿಸಾ ಬಾಲಿವುಡ್ ಚಿತ್ರದ ಆಫರ್ ಗಿಟ್ಟಿಸಿಕೊಂಡಿದ್ದು, ಚಿತ್ರದ ಸಂಭಾವನೆ ಸದ್ದು ಮಾಡುತ್ತಿದೆ.
ನಿರ್ದೇಶಕ ಸನೋಜ್ ಮಿಶ್ರಾ ಅವರ ‘ದಿ ಡೈರಿ ಆಫ್ ಮಣಿಪುರ’ದಲ್ಲಿ ಮೊನಾಲಿಸಾ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರ ಸಹೋದರನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ಮೋನಾಲಿಸಾ ಅವರಿಗೆ ಚಿತ್ರಕ್ಕೆ 21 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ. ಮಹಾಕುಂಭ ಮತ್ತು ಇತರ ಸ್ಥಳಗಳಲ್ಲಿ ರುದ್ರಾಕ್ಷ ಮಾಲೆ ಮಾರುತ್ತಿದ್ದ ಹುಡುಗಿ ತನ್ನ ಮೊದಲ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿ ಪ್ರವೇಶ ಮಾಡಲಿದ್ದಾರೆ. ಅಭಿಮಾನಿಗಳು ಅವರ ಚೊಚ್ಚಲ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.
ಚಿತ್ರದಲ್ಲಿ ಮೋನಾಲಿಸಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣಕ್ಕೂ ಮುನ್ನ ಅವರಿಗೆ ಮುಂಬೈನಲ್ಲಿ ವಿಶೇಷ ತರಬೇತಿ ನೀಡಲಾಗುವುದು.
“ಮಹಾಕುಂಭದಲ್ಲಿ ರುದ್ರಾಕ್ಷ ಮಾಲೆ ಮಾರೋ ಬಿಸಿನೆಸ್ ಸರಿಯಾಗಿ ನಡೆಯಲಿಲ್ಲ. 35,000 ರೂಪಾಯಿ ಸಾಲ ಮಾಡಿ ಮನೆಗೆ ವಾಪಸ್ ಬರಬೇಕಾಯ್ತು. ಮೀಡಿಯಾ ಮತ್ತು ಭಕ್ತರಿಂದ ತೊಂದರೆ ಆಗಿತ್ತು ” ಅಂತ ಮೊನಾಲಿಸಾ ಹೇಳಿದ್ದರು.
ಮಹಾ ಕುಂಭಮೇಳದಲ್ಲಿ ಮಾಧ್ಯಮದವರು ಮೊನಾಲಿಸಾರನ್ನು ಪದೇ ಪದೇ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರಿಂದ ತಪ್ಪಿಸಿಕೊಳ್ಳುತ್ತಿದ್ದರು. ನಿರಂತರ ತೊಂದರೆ ಮತ್ತು ಅನಾರೋಗ್ಯದಿಂದ ಮನೆಗೆ ವಾಪಸ್ ಬಂದಿದ್ದರು.
—-
Be the first to comment