ಸೆಸ್ಪನ್ಸ್, ಥ್ರಿಲ್ಲರ್ ಕತೆ ಹೊಂದಿರುವ ಸಾಲಿಗೆ ‘ಖನನ’ ಅಡಿಬರಹದಲ್ಲಿ ಮರಣ ಶಾಸನ ಚಿತ್ರದ ಶೀರ್ಷಿಕೆಯನ್ನು ಸಂಸ್ಕ್ರತ ಶಬ್ದಕೋಶದಿಂದ ಆಯ್ಕೆ ಮಾಡಿಕೊಂಡಿದ್ದು, ಅಗೆಯುವುದು, ಹೂಳುವುದು ಎಂಬರ್ಥ ಕೊಡುತ್ತದೆ. ಇದನ್ನು ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಬಳಸಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಪ್ರತಿ ದಿವಸ ಅಗೆಯುವುದು ಇದ್ದೇ ಇರುತ್ತದೆ. ಅದರ ವಿರುದ್ದ ಹೋರಾಡಲು ಆಗುವುದಿಲ್ಲ ಎಂದರೆ ಬದುಕಲು ಕಷ್ಟವಾಗುತ್ತದೆ. ಮನುಷ್ಯನ ಮನಸ್ಸು ಕ್ಷಣ ಕ್ಷಣ ಬದಲಾವಣೆಗಳು ಆಗುತ್ತಾ ಹೋಗುತ್ತದೆ. ಪ್ರಾಣಿಗಳಿಗೆ ಇರುವ ನಿಯತ್ತು ನಮಗೆ ಇರುವುದಿಲ್ಲ. ಕಥಾನಾಯಕನಿಗೆ ನಂಬಿದವನಿಂದ ಮೋಸವಾಗುತ್ತದೆ. ಇದರಿಂದ ಸೈಕಿಕ್ ಆಗುತ್ತಾನೆ. ಮುಂದೇನು ಎಂಬುದು ಸಿನಿಮಾ ನೋಡಬೇಕೆಂತೆ. ಕೋಲಾರ, ಚೆನ್ನಪಟ್ಟಣ, ಬೆಂಗಳೂರು, ಮೈಸೂರು ಮತ್ತು ಕೇರಳ ಸುಂದರತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಸಾಮಾನ್ಯನಾಗಿ, ಸೈಕಿಕ್, ಆರ್ಕಿಟೆಕ್ಟ್, ಸಿಕ್ಸ್ ಪ್ಯಾಕ್, ಕುಟುಂಬದ ಮಗ ಹೀಗೆ ಐದು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ನಾಯಕ ಆರ್ಯವರ್ಧನ್‍ಗೆ ಮೂರನೆ ಪ್ರಯತ್ನ. ಅಸ್ಸಾಂ ಮೂಲದ ಕರಿಷ್ಮಾ ಒಳ್ಳೆಯ, ಕೆಟ್ಟ ಪಾತ್ರದಲ್ಲಿ ಇಂಡೋ ಅಮೇರಿಕನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಚಿತ್ರಗಳಿಗೆ ಕೆಲಸ ಮಾಡಿರುವ ರಾಧ ಚಿತ್ರಕತೆ ರಚಿಸಿ ನಿರ್ದೇಶನ ಮಾಡಿದ್ದಾರೆ. ನಾಯಿ ಒಂದು ಪ್ರಮುಖ ಘಟ್ಟದಲ್ಲಿ 25 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದು ಕತೆಗೆ ತಿರುವು ಕೊಡಲಿದೆ ಎನ್ನುತ್ತಾರೆ. ತಾರಗಣದಲ್ಲಿ ಅವಿನಾಶ್, ವಿನಯಪ್ರಸಾದ್, ಓಂಪ್ರಕಾಶ್‍ರಾವ್, ಬ್ಯಾಂಕ್ ಜನಾರ್ಧನ್, ಮೋಹನ್‍ಜುನೇಜ ಮುಂತಾದವರ ನಟನೆ ಇದೆ. ನಾಲ್ಕು ಹಾಡುಗಳಿಗೆ ಕುನಿಗುಡಿಪಾಟಿ ಸಂಗೀತ, ಛಾಯಗ್ರಹಣ ರಮೇಶ್‍ತಿರುಪತಿ, ಕತೆ ರವಿಕಾಂತ್, ಸಂಕಲನ ನಲೀನ್‍ಬಡೆ ಅವರದಾಗಿದೆ. ಕ್ಯಾಮಾರಗಳನ್ನು ಬಾಡಿಗೆ ನೀಡುವ ಬಿ.ಶ್ರೀನಿವಾಸ್‍ರಾವ್ ಮಗನ ಭವಿಷ್ಯನವನ್ನು ರೂಪಿಸಲು ಎಸ್.ನಲಿಗೆ ಪ್ರೊಡಕ್ಷನ್ ಮೂಲಕ ಚಿತ್ರಕ್ಕೆ ಹಣ ಹೂಡಿದ್ದಾರೆ. ಸಿನಿಮಾ ನೋಡುವಂತೆ ಮಾಡಲು ಮಾಲ್‍ಗಳಲ್ಲಿ ಮೂವೀ ಕೂಪ್ ಟಿಕೆಟ್‍ದರ 900ನ್ನು ರಿಯಾಯತಿಯಾಗಿ 600 ರೂಗಳಿಗೆ ನೀಡಲಾಗುವುದು.
ಪ್ರಚಾರದ ಕೊನೆ ಹಂತವಾಗಿ ಕನ್ನಡ ಆಡಿಯೋ ಸಿಡಿಯನ್ನು ವಾಣಿಜ್ಯ ಮಂಡಳಿ ಕಾರ್ಯದರ್ಶಿ ಬಾ.ಮ.ಹರೀಶ್, ತಮಿಳು ಮತ್ತು ತೆಲುಗು ಸಿಡಿಯನ್ನು ಲಹರಿವೇಲು ಅನಾವರಣಗೊಳಿಸಿ ಶುಭ ಹಾರೈಸಿದರು.
Pingback: DevOps strategy consulting
Pingback: view publisher site
Pingback: dumps pin sites