ನಿರ್ಮಾಣ: ಪಾರ್ಥು
ನಿರ್ದೇಶನ: ಹರಿಪ್ರಸಾದ್ ಜಕ್ಕ
ಸಂಗೀತ: ಅನೂಪ್ ಸೀಳಿನ್
ತಾರಾಗಣ: ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು
ರೇಟಿಂಗ್: 3.5/5
ಪ್ರಜ್ವಲ್ ದೇವರಾಜ್ ನಾಯಕ ನಟನಾಗಿ ನಟಿಸಿರುವ, ಟೈಮ್ ಟ್ರಾವೆಲಿಗ್ ಎಳೆಯ ‘ಗಣ’ ಸಿನಿಮಾ ಬಿಡುಗಡೆಯಾಗಿದೆ.
ಚಿತ್ರದ ವಿಮರ್ಶೆ ಇಲ್ಲಿದೆ:
ಮನೆಯಲ್ಲಿ ಟೆಲಿಫೋನ್ ರಿಂಗಾಗುತ್ತೆ ಅವಳಲ್ಲಿ, ಇವನಿಲ್ಲಿ, ಇಬ್ಬರ ನಡುವೆ ಸಾಕಷ್ಟು ಮಾತಾಡುತ್ತಾರೆ. ಒಂದು ಆಕಸ್ಮಿಕ ಕರೆ, ಇಬ್ಬರ ಜೀವನವನ್ನೂ ಬದಲಾಗುತ್ತದೆ. ಸಿನಿಮಾ ಕುತೂಹಲದಿಂದಲೇ ಆರಂಭವಾಗಿ, ಕುತೂಹಲದಲ್ಲೇ ಸಾಗಿ, ಕೊನೆಗೆ ಮತ್ತಷ್ಟು ಕುತೂಹಲದಿಂದಲೇ ಅಂತ್ಯವಾಗುವ ಸಿನಿಮಾ.
ಈ ಮೊದಲು ಟೈಮ್ ಲೈನ್ ಕಥಾಹಂದರ ಸಿನಿಮಾಗಳು ಬಂದಿದ್ದರೂ, ಗಣ ಆ ಸಾಲಿನಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುತ್ತಾನೆ. ಈ ಚಿತ್ರದಲ್ಲಿ ಟೈಮ್‌ಲೈನ್ ಒಂದೇ ಪ್ರಧಾನವಾಗಿಲ್ಲ. ಒಂದು ಪ್ರೀತಿಯೂ ಅಡಕವಾಗಿದೆ. ಆ ಪ್ರೀತಿ ಯಾವುದೆಂದು ತಿಳಿಯಲು ಚಿತ್ರ ನೋಡಬೇಕು.
1993ರ ಕಾಲಘಟ್ಟದ ಭೂತ ಮತ್ತು 2022ರ ವರ್ತಮಾನದ ಜೊತೆ ಬದುಕುತ್ತಾ ಕಂಡು ಹಿಡಿಯುವ ರಹಸ್ಯಗಳು ಕ್ಷಣ ಕ್ಷಣ ಥ್ರಿಲ್ ಗೆ ಒಳಪಡಿಸುತ್ತವೆ. ಆತ್ಮೀಯ ಸಂಭಾಷಣೆ, ಪ್ರೇಮಿಗಳ ನವೀರಾದ ಶೃಂಗಾರ ಒಂದು ಕಡೆಯಾದರೆ, ಭೀಕರ ಕೊಲೆ, ದ್ವೇಷ, ದುರಂತ ಇನ್ನೊಂದು ಕಡೆ. ಹೀಗೆ ಎರಡು ಮುಖಗಳಲ್ಲಿ ಗಣ ಪ್ರೇಕ್ಷಕರಿಗೆ ಹೊಸತನವನ್ನು ಉಣಬಡಿಸಿದೆ.
ಟೈಮ್‌ಲೈನ್ ಕಥೆಯಲ್ಲಿ ವ್ಯಕ್ತವಾದ ತಾಯಿ-ಮಗನ ಪ್ರೀತಿ, ವಾತ್ಸಲ್ಯ ಈ ಚಿತ್ರದ ಒನ್‌ಲೈನ್ ಎನ್ನಬಹುದು. ಚಿತ್ರದ ಕಥೆಯನ್ನು ನಿರ್ದೇಶಕ ಹರಿಪ್ರಸಾದ್ ಬಹು ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ.
ಗಣ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ಅದ್ಭುತವಾಗಿ ನಟಿಸಿದ್ದಾರೆ. ಸುಜಾತ ಪಾತ್ರದಲ್ಲಿ ವೇದಿಕಾ ಕುತೂಹಲದ ಅಂಶವಾಗಿದ್ದರೆ, ಶೃತಿಯಾಗಿ ಯಶ ಶಿವಕುಮಾರ್ ಮುದ್ದಾಗಿ ಕಾಣುತ್ತಾರೆ. ಶಿವರಾಜ್ ಕೆ.ಆರ್.ಪೇಟೆ, ರವಿ ಕಾಳೆ, ಸಂಪತ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರಮೇಶ್ ಭಟ್ ಪಾತ್ರಗಳು ಗಮನ ಸೆಳೆಯುತ್ತವೆ.
ಅನೂಪ್ ಸೀಳಿನ್ ಸಂಗೀತ, ಜೈ ಆನಂದ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ , ಸತೀಶ್ ಎ ಕಲಾ ನಿರ್ದೇಶನ ಚಿತ್ರಕ್ಕೆ ಇದೆ.
Be the first to comment