ರೋಹನ್ ಕೀರ್ತಿ

Movie Review: ಪಾರ್ವತಿ, ಪಾಯಲ್ ಮತ್ತು ಪ್ರಯಾಣ..!

ಚಿತ್ರ : ಪಾರು ಪಾರ್ವತಿ
ನಿರ್ಮಾಣ : ಪಿ ಬಿ ಪ್ರೇಮನಾಥ್
ನಿರ್ದೇಶನ : ರೋಹಿತ್ ಕೀರ್ತಿ
ನಟನೆ : ದೀಪಿಕಾ ದಾಸ್, ಪೂನಂ ಸರ್ ನಾಯಕ್
ರೇಟಿಂಗ್ : 3.5/5

ಹಿರಿಯ ನಾಗರಿಕ ಮಹಿಳೆಯನ್ನು ಪ್ರಧಾನ ಪಾತ್ರವಾಗಿಸಿ ಒಂದು ಲವಲವಿಕೆಯ ಕತೆ ಹೇಳಿದ್ದಾರೆ ನಿರ್ದೇಶಕ ರೋಹನ್ ಕೀರ್ತಿ.

ಪಾರ್ವತಿಗೆ ಪತಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ಇದ್ದಾರೆ. ಆದರೂ ಈಕೆ ಮನೆಯೊಳಗೆ ಏಕಾಂಗಿನಿ. ಮಕ್ಕಳು ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದಾರೆ. ಪತಿ ಉತ್ತರ ಭಾರತದಲ್ಲಿ ಮಿಲಿಟರಿ ಉದ್ಯೋಗಿ. ಮಕ್ಕಳ ಕಾಳಜಿ ಫೋನ್ ಮೂಲಕವಾದರೆ, ಪತಿಯೊಂದಿಗೆ ಮಾತು ಕತೆಯೇ ಇಲ್ಲ! ಆದರೆ ಅದೊಂದು ದಿನ ಪಾರ್ವತಿಯ ಮನದಲ್ಲಿ ಭಾರೀ ಬದಲಾವಣೆ. ಮನೆ ಬಿಟ್ಟು ಗಂಡನಿರುವ ಕಡೆಗೆ ಹೋಗಿ ಭೇಟಿಯಾಗಲು ಬಯಸುತ್ತಾರೆ. ಇದಕ್ಕೆ ಮುಖ್ಯ ಕಾರಣ, ತಮ್ಮ ವಿವಾಹದ ಐವತ್ತನೇ ವಾರ್ಷಿಕೋತ್ಸವವನ್ನು ಪತಿಯೊಂದಿಗೆ ಕಳೆಯಬೇಕು ಎನ್ನುವ ಒಲವು. ಪತಿಯೆಡೆಗಿನ ಈ ಪ್ರಯಾಣಕ್ಕೆ ಜತೆ ನೀಡುವಾಕೆಯೇ ಪಾಯಲ್ ಎನ್ನುವ ಸುಂದರಿ.

ಪಾಯಲ್ ‘ಜರ್ನಿ ಆ್ಯಂಡ್ ಜರ್ನಿ’ ಯೂಟ್ಯೂಬ್ ಚಾನೆಲ್ ಹೊಂದಿರುವ ಟ್ರಾವೆಲಿಸ್ಟ್. ಈಕೆಯ ಸೋಲೋ ಟ್ರಿಪ್ ನಲ್ಲಿ ಪಾರ್ವತಿ ಸೇರಿಕೊಳ್ಳುತ್ತಾರೆ. ಪ್ರಯಾಣದ ಜೊತೆಯಲ್ಲೇ ಇಬ್ಬರ ಜೀವನದ ಪ್ಲ್ಯಾಶ್ ಬ್ಯಾಕ್ ಕಡೆಗೂ ಬೆಳಕು ಚೆಲ್ಲಲಾಗುತ್ತದೆ. ಈ ಪಯಣ ಎದುರಿಸುವ ಅಡೆತಡೆಗಳೇನು? ಎಷ್ಟೊಂದು ವರ್ಣಮಯವಾಗಿರುತ್ತದೆ ಎನ್ನುವುದನ್ನು ಚಿತ್ರಮಂದಿರಗಳಲ್ಲಿ ನೋಡುವುದೇ ಸೊಗಸು.

ಪಾರು ಪಾತ್ರಕ್ಕೆ ಹಿರಿಯ ನಟಿ ಪೂನಂ ಜೀವ ತುಂಬಿದ್ದಾರೆ. ಕನ್ನಡದಲ್ಲಿ ನಟಿಯಾಗಿ ಇವರಿಗೆ ಇದು ಕನ್ನಡದ ಪ್ರಥಮ ಚಿತ್ರ. ಪಾಯಲ್ ಪಾತ್ರದಲ್ಲಿ ದೀಪಿಕಾ ದಾಸ್ ನಟಿಸಿದ್ದಾರೆ. ಚಿತ್ರ ಕಲಾವಿದೆ, ಯೂಟ್ಯೂಬರ್ ಆಗಿ ದೀಪಿಕಾ ಬಹುಮುಖ ಪ್ರತಿಭೆಯ ಪಾತ್ರವಾಗಿದ್ದಾರೆ.

ಎರಡು ಮಹಿಳಾ ಪಾತ್ರಗಳನ್ನೇ ಪ್ರಧಾನ ಭೂಮಿಕೆಯಲ್ಲಿ ತೋರಿಸಿರುವ ಸಿನಿಮಾ ಇದು. ಆದರೆ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವಂಥ ದೃಶ್ಯಗಳು ಚಿತ್ರದಲ್ಲಿವೆ. ಹೀಗಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಸಿನಿಮಾ‌ ಮೆಚ್ಚುಗೆಯಾಗುವುದರಲ್ಲಿ ಸಂದೇಹವಿಲ್ಲ.

ಪಾರು ಪಾರ್ವತಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!