ಚಿತ್ರ: ರುದ್ರ ಗರುಡ ಪುರಾಣ
ನಿರ್ದೇಶನ: ಕೆ ಎಸ್ ನಂದೀಶ್
ಪಾತ್ರವರ್ಗ: ರಿಷಿ, ಪ್ರಿಯಾಂಕ ಕುಮಾರ್, ಅವಿನಾಶ್, ವಿನೋದ್ ಆಳ್ವ ಇತರರು
ರೇಟಿಂಗ್: 3.5
ಈ ವಾರ ತೆರೆಗೆ ಬಂದಿರುವ ರುದ್ರ ಗರುಡ ಪುರಾಣ ಸಿನಿಮಾ ಥ್ರಿಲ್ಲರ್ ಅಂಶವನ್ನು ಒಳಗೊಂಡ ರಿವೇಂಜ್ ಕಥೆಯಾಗಿ ಪ್ರೇಕ್ಷಕರ ಗಮನ ಸೆಳೆಯುತ್ತದೆ.
ಭೂಮಿ ಮೇಲೆ ಮಾಡಿದ ಪಾಪಕ್ಕೆ ಇಲ್ಲೇ ಶಿಕ್ಷೆ ಅನುಭವಿಸಿ ಹೋಗಿ ಎನ್ನುವುದು ಚಿತ್ರದ ಒಂದು ಲೈನ್ ಸ್ಟೋರಿ. ಪಾಪಿಗಳಿಗೆ ಇಲ್ಲೇ ಶಿಕ್ಷೆ ಕೊಡುವವರು ಯಾರು ಎನ್ನುವುದನ್ನು ನೋಡಿದರೆ ಇಲ್ಲಿ ಒಂದಷ್ಟು ಫ್ಲಾಶ್ ಬ್ಯಾಕ್ ಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ತನಿಖೆಯಿಂದ ಆರಂಭವಾಗುವ ಕಥೆ ಮುಂದೆ ಪ್ರತಿಕಾರ ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತದೆ. ನಾಯಕ ಯಾಕೆ ಪ್ರತೀಕಾರ ತೆಗೆದುಕೊಳ್ಳುತ್ತಾನೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕು.
ರಿಷಿ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಹುಟ್ಟಿಸುವ ಕುತೂಹಲ ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ. ನಾಯಕಿ ಪ್ರಿಯಾಂಕ ಕುಮಾರ್ ಅವರ ಪಾತ್ರ ತನಿಖೆಯ ಹಾದಿಯಲ್ಲಿ ವಿಶ್ರಾಂತಿ ನಿಲ್ದಾಣದಂತೆ ಕೆಲಸ ಮಾಡಿದೆ.
ಚಿತ್ರದಲ್ಲಿ ರಾಜಕಾರಣಿ, ಆತನ ಮಗನ ಪ್ರೇಮ ಕಥೆ, ವಿದ್ಯಾರ್ಥಿಗಳ ಸಾವು ಹೀಗೆ ಒಂದಷ್ಟು ಪಾತ್ರಗಳು ಬಂದು ಹೋಗುತ್ತವೆ. ಕ್ಲೈಮಾಕ್ಸ್ ನೋಡಿದ ನಂತರವೂ ಪ್ರೇಕ್ಷಕರಿಗೆ ಚಿತ್ರಕಥೆ ಕಾಡುವಂತಿದೆ.
ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ವಿಭಿನ್ನ ಅನುಭವವನ್ನು ನೀಡಬಹುದು.

Be the first to comment