ನಟ ಸುದೀಪ್ ಮನೆಯ ಕುಡಿ ಸಂಚಿತ್ ಸಂಜೀವ್ ಚೊಚ್ಚಲ ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ಕರಾವಳಿ ಬೆಡಗಿ ಕಾಜಲ್ ಕುಂದರ್ ಸೇರ್ಪಡೆಗೊಳ್ಳುತ್ತಿದ್ದಾರೆ.
ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸಿರುವ ಚಿತ್ರವು ಜನವರಿ 24 ರಂದು ಫರ್ಸ್ಚ್ ಲುಕ್ ಮತ್ತು ಟೈಟಲ್ ನ್ನು ಅದ್ಧೂರಿಯಾಗಿ ಅನಾವರಣಗೊಳಿಸಲಿದೆ.
ಮೇಘ ಮತ್ತು ಲೈನ್‌ಮ್ಯಾನ್‌ನಂತಹ ಚಿತ್ರಗಳಲ್ಲಿ ಅಸಾಂಪ್ರದಾಯಿಕ ಮತ್ತು ಅರ್ಥಪೂರ್ಣ ಪಾತ್ರಗಳಿಗೆ ಹೆಸರುವಾಸಿಯಾದ ಕಾಜಲ್ ಕುಂದರ್ ಮತ್ತೊಂದು ಕುತೂಹಲಕಾರಿ ಪಾತ್ರವನ್ನು ಜೀವಂತಗೊಳಿಸಲು ಉತ್ಸುಕರಾಗಿದ್ದಾರೆ.
“ನಿರ್ದೇಶಕರು ಮತ್ತು ತಂಡವು ನನ್ನ ಹಿಂದಿನ ಕೆಲಸವನ್ನು ನೋಡಿದ್ದರು.ನಾನು ಆ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತೇನೆ ಎಂದು ಭಾವಿಸಿದರು. ವಿವೇಕ್ ನನಗೆ ಆಡಿಷನ್ ನೀಡಲು ಹೇಳಿದ್ದರು. ಹೀಗಾಗಿ ನಾನು ಈ ಸಿನಿಮಾದಲ್ಲಿದ್ದೇನೆ” ಎಂದು ಕಾಜಲ್ ಕುಂದರ್ ಸಂತಸ ವ್ಯಕ್ತ ಪಡಿಸಿದ್ದಾರೆ.
“ನಾನು ಪಕ್ಕದ ಮನೆಯ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಇದರಲ್ಲಿ ಅಭಿನಯಕ್ಕೆ ಸಾಕಷ್ಟು ಅವಕಾಶವಿದೆ. ಇದು ನನ್ನನ್ನು ರೋಮಾಂಚನಗೊಳಿಸಿತು. ವರ್ಕ್ ಶಾಪ್ ಈಗಾಗಲೇ ನಡೆಯುತ್ತಿವೆ. ಫೆಬ್ರವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಮೊದಲು ನಾನು ತಯಾರಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದೇನೆ” ಎಂದಿದ್ದಾರೆ
ಕಾಜಲ್ ಕುಂದರ್ ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಮತ್ತು ಹೊಸ ತಂಡದ ಜೊತೆ ಹೆಸರಿಡದ ಹಾಸ್ಯ ಚಿತ್ರದಲ್ಲಿ ನಟಿಸುತ್ತಿದ್ದಾರೆ.
Be the first to comment